

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ), ವಾಸ್ತುಶಿಲ್ಪದ ಪರೀಕ್ಷೆ ಮುಗಿದ 3 ಗಂಟೆ ಅವಧಿ ಯೊಳಗೆ ಫಲಿತಾಂಶ ನೀಡಿದೆ.
36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಾಸ್ತುಶಿಲ್ಪದಲ್ಲಿ ವಿನ್ಯಾಸ ಮತ್ತು ಚಿತ್ರಕಲೆ ವಿಷಯದ ಪರೀಕ್ಷೆಯನ್ನು ಎಸ್ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲಾಯಿತು. ಪರೀಕ್ಷೆ ಮುಗಿದ ತಕ್ಷಣ ಮೌಲ್ಯಮಾಪನ ಮಾಡಿಸಿ ಫಲಿತಾಂಶ ನೀಡಲಾಗಿದೆ ಎಂದು ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಹೇಳಿದ್ದಾರೆ.