

ಮಡಿಕೇರಿ: ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಲಯದಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಪರೀಕ್ಷೆ ಸಿದ್ಧತೆ ಸಂಬಂಧಿತ ಸಮಾಲೋಚನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ೧೦ ಮತ್ತು ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಚೇತನ ಮಕ್ಕಳ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯರವರು, ಪರೀಕ್ಷೆಯ ಪೂರ್ವಭಾವಿ ತಯಾರಿ ಮತ್ತು ಮಾನಸಿಕ ಒತ್ತಡ, ಮನಸ್ಸನ್ನು ಹತೋಟಿಯಲ್ಲಿಟ್ಟು ಪರೀಕ್ಷೆ ಹಾಗೂ ಜೀವನದ ಸವಾಲು, ಸಮಸ್ಯೆಗಳನ್ನು ಬಗೆಹರಿಸುವುದರ ಕುರಿತು ತಿಳಿ ಹೇಳಿದರು.
ಸ್ವಸ್ಥ ಸಂಸ್ಥೆಯ ಡಾ.ಶ್ರೀರಾಮ್ ಜೀ ರವರು ವಿದ್ಯಾರ್ಥಿಗಳಿಗೆ ಉಸಿರಾಟದ ವ್ಯಾಯಮ ಪ್ರಾಯೋಗಿಕವಾಗಿ ಪ್ರದರ್ಶಿಸಿ ಮಾತನಾಡಿ, ವ್ಯಾಯಾದಿಂದ ಮನಸ್ಸಿನಲ್ಲಿರುವ ಒತ್ತಡಗಳನ್ನು ಕಡಮೆ ಮಾಡಬಹುದು. ದಿನನಿತ್ಯ ಮಕ್ಕಳು ವ್ಯಾಯಮ ಅಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಲಹೆ ಮಾಡಿದರು.
ಶಾಲಾ ಸಂಸ್ಥೆಯ ಮುಖ್ಯಸ್ಥೆ ದ್ರಾಕ್ಷಾಯಿಣಿ ವಾಸುದೇವ್, ಕಾರ್ಯದರ್ಶಿ ಸಚಿನ್ ವಾಸುದೇವ್, ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಸದಸ್ಯೆಯರಾದ ಅಗ್ನೇಶ್ ಮುತ್ತಣ್ಣ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇನ್ನರ್ ವೀಲ್ ಸಂಸ್ಥೆ ಕಾರ್ಯದರ್ಶಿ ಲಲಿತಾರಾಘವನ್, ಖಜಾಂಚಿ ರಶ್ಮಿ ಪ್ರವೀಣ್, ಸದಸ್ಯೆಯರಾದ ಉಮಾಗೌರಿ, ಮಲ್ಲಿಗೆ ಪೈ ಇದ್ದರು.