ಫಲಿತಾಂಶ ಹೆಚ್ಚಳಕ್ಕೆ ಹತ್ತಾರು ಕಸರತ್ತು

exam
Published on

ಮಡಿಕೇರಿ:

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಸಂಬAಧ ಭರದ ಸಿದ್ಧತೆ ನಡೆದಿದೆ. ಮಾ. 1ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾದರೆ ಮಾ.21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶುರುವಾಗಲಿದೆ. ಕೊಡಗು ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದರೆ, ಪಿಯುಸಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ಸುಧಾರಿಸಲು ಜಿಲ್ಲಾಡಳಿತ ಶೈಕ್ಷಣಿಕ ವರ್ಷದ ಆರಂಭದಿAದಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಎರಡು ಪರೀಕ್ಷೆಯಲ್ಲೂ ಈ ಬಾರಿ ಕೊಡಗು ರಾಜ್ಯದಲ್ಲಿ ನಂ.1 ಸ್ಥಾನ ಗಳಿಸುವ ಗುರಿ ಇಟ್ಟುಕೊಂಡು ಸಿದ್ಧತೆಗಳನ್ನು ನಡೆಸಲಾಗಿದೆ.

ಮಾ. 1ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸುಗಮ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಸಂಬAಧ ಪೂರ್ವಭಾವಿ ಸಭೆ ನಡೆಸಿ ಎಲ್ಲಾ ಸಿದ್ಧತೆಗಳ ಅವಲೋಕನ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ಸಂದರ್ಭ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆಯಿಂದ ವಿದ್ಯಾರ್ಥಿಗಳು ಸುಲಲಿತವಾಗಿ ಪರೀಕ್ಷೆ ಬರೆಯುವುದಕ್ಕೆ ಸಾಧ್ಯವಾಗುವ ತನಕ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಸುಮಾರು 1 ತಿಂಗಳಿಗಿAತ ಕಡಿಮೆ ಕಾಲಾವಕಾಶ ಇದ್ದು, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪುನರ್ಮನನ ತರಗತಿಗಳನ್ನು ಏರ್ಪಡಿಸಲಾಗುತ್ತಿದೆ. ರಜಾ ದಿನಗಳಲ್ಲೂ ಪಾಠ ಮಾಡಲಾಗುತ್ತಿದೆ. ಪೋಷಕರ ಸಭೆಗಳನ್ನು ಮಾಡಿ ಮಕ್ಕಳ ಕಲಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. ವಾರ ವಾರವೂ ಪರೀಕ್ಷೆ ನಡೆಸಿ ಫಲಿತಾಂಶಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರೀಕ್ಷೆಯ ಭಯ ಹೋಗಲಾಡಿಸಲೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ಒಟ್ಟಾರೆ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು, ಮಾದರಿ ಪ್ರಶ್ನೆ ಪತ್ರಿಕೆಗೆ ಸಂಬAಧಿಸಿದ ಪ್ರಶ್ನೆಗಳಿಗೆ ಉತ್ತರ ಸಿದ್ದಪಡಿಸಿ, ಇಲಾಖೆ ಗೊತ್ತುಪಡಿಸಿದ ನೀಲನಕ್ಷೆಗೆ ಅನುಗುಣವಾಗಿ ಪ್ರತಿಯೊಂದು ವಿಷಯಗಳನ್ನು ಏಕಚಿತ್ತದಿಂದ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಎದುರಿಸಬೇಕು. ವಿದ್ಯಾರ್ಥಿಗಳು ಜಿಲ್ಲಾಡಳಿತದ ನಿರೀಕ್ಷೆ ಹುಸಿಗೊಳಿಸಬಾರದು.

ತಿಲೋತ್ತಮೆ ನಂದಕುಮಾರ್, ನಿವೃತ್ತ ಪ್ರಾಂಶುಪಾಲರು, ಸೋಮವಾರಪೇಟೆ

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಹತ್ತಿರ ಬರುತ್ತಿದೆ. ಗುಣಾತ್ಮಕ ಫಲಿತಾಂಶಕ್ಕೆ ಶಿಕ್ಷಕರ ಕಾರ್ಯದಕ್ಷತೆ, ಅಧಿಕಾರಿಗಳ ಶೈಕ್ಷಣಿಕ ಕಲಿಕಾ ಮೇಲ್ವಿಚಾರಣೆ ಹಾಗೂ ಸಮುದಾಯದ ಸಹಭಾಗಿತ್ವ ಪ್ರಮುಖ ಅಂಶಗಳಾಗಿದೆ. ಶಿಕ್ಷಕ ಹಾಗೂ ಅಧಿಕಾರಿ ವರ್ಗದವರ ಪ್ರಬಲ ಇಚ್ಛಾ ಶಕ್ತಿ ಈ ವರ್ಷವೂ ಕೂಡ ಹೀಗೆಯೇ ಮುಂದುವರೆದು ಈ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಡೀ ರಾಜ್ಯಕ್ಕೆ ಮೊದಲಾಗಲಿ ಎಂಬುದು ನಮ್ಮ ಆಶಯ

ಸಿ.ಜೆ. ಧನ್ಯಾ, ಪ್ರೌಢಶಾಲೆ ಶಿಕ್ಷಕಿ, ಮಾಲ್ದಾರೆ

ಕೊಡಗು ಜಿಲ್ಲೆ ಕಳೆದ 5-6 ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಕೊರೋನಾ ಎಂಬ ಮಹಾಮಾರಿಗೆ ಒಳಗಾಗಿ ಮಕ್ಕಳ ಕಲಿಕೆಯಲ್ಲಿ ಹಿಂದುಳಿದು, ಫಲಿತಾಂಶದಲ್ಲಿ ಹಿಂದುಳಿದಿದೆ. ಈ ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ಅನೇಕ ಸುಧಾರಿತ ಕ್ರಮವನ್ನು ಕೈಗೊಂಡಿದ್ದಾರೆ. ಕೊಡಗು ಉತ್ತಮ ಪರಿಸರ, ಶಿಸ್ತು ಮತ್ತು ಸಂಸ್ಕೃತಿಗೆ ಹೆಸರು ವಾಸಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಬರಲೆಂದು ಉತ್ತಮ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

ಚೆರಿಯಮನೆ ಪುನೀತ ಅರುಣಕುಮಾರ್, ಮುಖ್ಯಶಿಕ್ಷಕಿ ಬಿಜಿಎಸ್ ಶಿಕ್ಷಣ ಸಂಸ್ಥೆ, ಮದೆನಾಡು

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕೊಡಗು ಮೊದಲ ಸ್ಥಾನ ಪಡೆಯಲು ಈ ಬಾರಿ ಶಾಲಾ ಕಾಲೇಜುಗಳು ಎಲ್ಲಾ ರೀತಿಯ ತಯಾರಿ ನಡೆಸಿದೆ. ಕಾಲೇಜು, ಪ್ರೌಢ ಶಾಲೆಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಶಾಲಾ ಕಾಲೇಜಿನಲ್ಲಿ ತುಂಬಾ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ನೀಡುವ ಮೂಲಕ ಫಲಿತಾಂಶ ಹೆಚ್ಚು ಬರಲು ಸಿದ್ಧತೆಗಳನ್ನು ನಡೆಸಿದ್ದು, ಖಾಸಗಿ ಶಾಲಾ ಕಾಲೇಜುಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ.

ಎಸ್.ಜೆ. ಪ್ರಸನ್ನಕುಮಾರ್ ಮಾಲಂಬಿ, ಅಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಲೂರು ಸಿದ್ದಾಪುರ

ಎಸ್‌ಎಸ್‌ಎಲ್‌ಸಿ ಕಳೆದ ಸಾಲಿನಲ್ಲಿ ಕೊಡಗು ರಾಜ್ಯಕ್ಕೆ 3ನೇ ಸ್ಥಾನ, ಕ್ವಾಲಿಟಿಯಲ್ಲಿ ಮೊದಲ ಸ್ಥಾನವಿದೆ. ವಿದ್ಯಾರ್ಥಿಗಳು ದಿನಕ್ಕೆ 15 ಗಂಟೆಗಳ ಕಾಲ ಓದಬೇಕು. ಪೋಷಕರು ಮನೆಯಲ್ಲಿ ಓದಲು ಪೂರಕ ವಾತಾವರಣ ಸೃಷ್ಟಿ ಮಾಡಿಕೊಡಬೇಕು. ಒತ್ತಡ ಹೇರಬಾರದು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಸಿ.ಆರ್. ಲೋಕೇಶ್, ಮುಖ್ಯ ಶಿಕ್ಷಕ, ಅರುಣ ವಿದ್ಯಾಸಂಸ್ಥೆ, ಚೇರಂಬಾಣೆ

ಜಿಲ್ಲಾಡಳಿತದ ಈ ನಿರೀಕ್ಷೆ ಹೆಮ್ಮೆ ಪಡುವಂಥ ವಿಚಾರವಾಗಿದೆ. ಪ್ರತಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಉತ್ತಮ ಅಂಕದೊAದಿಗೆ ಎಲ್ಲರೂ ಉತ್ತೀರ್ಣರಾಗಲು ಬೇಕಾದಂಥ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಪರಿಶ್ರಮ ಪಟ್ಟರೆ ಕೊಡಗು ಈ ಬಾರಿ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.

ಕೃತಿಕಾ ಹೆಚ್.ವಿ., ವಿರಾಜಪೇಟೆ

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಜಾ ದಿನಗಳನ್ನೂ ಪಾಠ ಮಾಡಲಾಗುತ್ತಿದೆ. ಪೋಷಕರ ಸಭೆಗಳನ್ನು ಮಾಡಿ ಚರ್ಚೆ ನಡೆಸಲಾಗಿದೆ. ವಾರ ವಾರವೂ ಪರೀಕ್ಷೆ ನಡೆಸಿ ಫಲಿತಾಂಶಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳನ್ನು ಬೆಳಗ್ಗೆ ಬೇಗ ಎದ್ದೇಳಿಸುವ ಸಲುವಾಗಿ ಪೋಷಕರ ಮೂಲಕ ಕರೆಗಳನ್ನು ಮಾಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೆ ವಿಶೇಷ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ.

ಟಿ.ಜಿ. ಪ್ರೇಮಕುಮಾರ್, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ ಕೂಡುಮಂಗಳೂರು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಾರಿ ರಾತ್ರಿ ಉಳಿಸಿಕೊಳ್ಳಲು ಅವಕಾಶ ಇರುವ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಂಡು ತರಬೇತಿ ಕೊಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಇರಬಹುದಾದ ಭಯ ಹೋಗಲಾಡಿಸಲು ಪರಿಣಿತರಿಂದ ಸಮಾಲೋಚನೆಗಳನ್ನು ನಡೆಸಲಾಗುತ್ತಿದೆ. 3-4 ಶಾಲೆಗÀಳನ್ನು ಒಟ್ಟು ಸೇರಿಸಿ ಪ್ರತಿಭಾವಂತ ಶಿಕ್ಷಕರ ಮೂಲಕ ತರಬೇತಿ ಕೊಡಿಸಲಾಗುತ್ತಿದೆ. ಇದೀಗ ರಾಜ್ಯ ಮಟ್ಟದ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ.

ಸಿ. ರಂಗಧಾಮಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾ. 1 ರಿಂದ 20 ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ 5,240 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇವರಲ್ಲಿ ಪ್ರೆಸರ್ಸ್ 4,865 ವಿದ್ಯಾರ್ಥಿಗಳು, ಖಾಸಗಿಯಾಗಿ 254 ವಿದ್ಯಾರ್ಥಿಗಳು ಹಾಗೂ 121 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 19 ಪರೀಕ್ಷಾ ಕೇಂದ್ರಗಳಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೆ. ಮಂಜುಳಾ, ಉಪನಿರ್ದೇಶಕಿ, ಪದವಿ ಪೂರ್ವ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net