ಮಾಜಿ ಸೈನಿಕರ ಸಂಘಕ್ಕೆ ಪದಾಧಿಕಾರಿ ಆಯ್ಕೆ

4
Published on

ಅಥಣಿ: ತಾಲೂಕು ಮಾಜಿ ಸೈನಿಕರ ಸಂಘಕ್ಕೆ ಐದು ವರ್ಷಗಳ ಅವಧಿಗೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ಜರುಗಿತು.

ಅಧ್ಯಕ್ಷರಾಗಿ ಅಣಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸತ್ಯಪ್ಪ ಮೆಂಡಿಗೇರಿ, ಕಾರ್ಯದರ್ಶಿಯಾಗಿ ಅಶೋಕ ಬೆಟಗೇರಿ, ಖಜಾಂಚಿಯಾಗಿ ರಾಜಶೇಖರ ಕಾಶಿದ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸದಸ್ಯರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷ ಶ್ರೀಮಂತ ಸೋಂದಕರ, ಗಿರೀಶ ಮಾಳಿ, ಶಹಬುದ್ದೀನ್ ಹವಾಲ್ದಾರ, ಸೋಮಲಿಂಗ ಶರಣ, ಧರಿಗೌಡ ಬಿರಾದಾರ, ಬಾಳಸಾಹೇಬ ಮೋಹಿತೆ, ಅಪ್ಪಾಸಾಹೇಬ ಸಾಳುಟಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net