ಮಾಜಿ ಸೈನಿಕರ ಸಭೆ 10ರಂದು

Published on

ಹುಬ್ಬಳ್ಳಿ: ನ್ಯಾಷನಲ್ ಎಕ್ಸ್ ಸವಿರ್ಸ್ ಮೆನ್ ಕೋ ಆರ್ಡಿನೇಷನ್ ಕಮಿಟಿ ಧಾರವಾಡ ಜಿಲ್ಲಾ ಟಕದ ವತಿಯಿಂದ ಜಿಲ್ಲೆಯ ಮಾಜಿ ಸೈನಿಕರ ಹಾಗೂ ಅವರ ಬೆಂಬಲಿತರ ಕುಂದುಕೊರತೆಗಳನ್ನು ಆಲಿಸಲು ನವೆಂಬರ್ 10ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ ಎದುರು ಯಾತ್ರಿ ಹೋಟೆಲ್ ನಲ್ಲಿ ಸಭೆ ಏರ್ಪಡಿಸಲಾಗಿದೆ.

ವಾಯು ದಳದ ನಿವೃತ್ತ ಏರ್ ಕಮೊಡೊರ್ ಸಿ.ಎಸ್. ಹವಾಲ್ದಾರ, ಜಿಲ್ಲಾ ಸೈನಿಕ ಬೋರ್ಡ್ ಜಂಟಿ ನಿರ್ದೇಶಕ ಡಾ. ಪ್ರಕಾಶ ಎನ್.ಎಸ್., ಕರ್ನಲ್ ಪ್ರಕಾಶಕುಮಾರ ಎಂ.ಪಿ. ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಾಜಿ ಸೈನಿಕರು, ಅವರ ಅವಲಂಬಿತರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕಮಿಟಿ ಅಧ್ಯಕ್ಷ ಸುರೇಶ ಕುಲಕರ್ಣಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net