ಖಾಸಗಿಯವರ ಗುತ್ತಿಗೆ ಅವಧಿ ಮುಕ್ತಾಯ, ಕುಣಿಗಲ್​ ಸ್ಟಡ್​ ಫಾರ್ಮ್ ಹೊಣೆ ಕೇಂದ್ರ ಸರ್ಕಾರವೇ ವಹಿಸಿಕೊಳ್ಳಲಿ: ಎಸ್​ಪಿಎಂ ಮನವಿ

kunigal stud farm
Published on

ತುಮಕೂರು: ಖಾಸಗಿಯವರ ಗುತ್ತಿಗೆ ಅವಧಿ ಮುಗಿದಿರುವ ಕುಣಿಗಲ್​ ಸ್ಟಡ್​ ಫಾರ್ಮ್​ ಅಭಿವೃದ್ಧಿಯ ಹೊಣೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಷಿ ಅವರನ್ನು ಭೇಟಿದ ಎಸ್​ಪಿಎಂ, ಕುಣಿಗಲ್​ ಸ್ಟಡ್​ ಫಾರ್ಮ್​ ವಿಶ್ವವಿಖ್ಯಾತ ಕುದುರೆ ಸಂತಾನೋತ್ಪತ್ತಿ ಕೇಂದ್ರವಾಗಿದೆ. 421 ಎಕರೆ ಪ್ರದೇಶದಲ್ಲಿರುವ ಸ್ಟಡ್​ ಫಾರ್ಮ್​ನ ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಿದರು.

ಮೈಸೂರು ಅರಸರ ಕಾಲದಿಂದಲೂ ಇಲ್ಲಿನ ಮಣ್ಣಿನ ವಿಶೇಷ ಗುಣದ ಆಧಾರದ ಮೇಲೆ ಕುದುರೆ ಸಾಕಾಣಿಕೆ ಮತ್ತು ಸಂತಾನೋತ್ಪತ್ತಿ ಕೇಂದ್ರವಾಗಿ ಉಪಯೋಗಿಸಲಾಗುತ್ತಿದೆ. ಸೈನ್ಯಕ್ಕೆ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸ್ಟಡ್​ ಫಾರ್ಮ್​ ಕಾರಣದಿಂದಲೂ ನಮ್ಮ ಕುಣಿಗಲ್​ಗೆ ಒಂದು ಬ್ರಾಂಡ್​ ವ್ಯಾಲ್ಯೂ ಬಂದಿದೆ ಎಂದರೆ ತಪ್ಪಾಗಲಾರದು. ಅನೇಕರಿಗೆ ಉದ್ಯೋಗ ಕೂಡ ಲಭ್ಯವಾಗಿದೆ. ಪ್ರಸ್ತುತ ಇದರ ಗುತ್ತಿಗೆ ಅವಧಿ ಮುಗಿದಿರುವುದು ಸ್ಟಡ್​ ಫಾರ್ಮ್ ಉಳಿಸಿಕೊಳ್ಳಬೇಕಿದೆ ಎಂದು ಮನವರಿಕೆ ಮಾಡಿದ್ದಾರೆ.

ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡರೆ ಭಾರತೀಯ ಸೇನೆಗೆ ಅಗತ್ಯವಿರುವ ಕುದುರೆಗಳನ್ನು ಇಲ್ಲಿಂದಲೇ ಸರಬರಾಜು ಮಾಡಬಹುದು. ಜತೆಗೆ ಸ್ಥಳಿಯರಿಗೂ ಉದ್ಯೋಗಾವಕಾಶ ಲಭ್ಯವಾಗಲಿದೆ. ಈ ಬಗ್ಗೆ ನಮ್ಮ ರಾಜ್ಯದವರೇ ಆದ ಹಿರಿಯ ಸಚಿವ ಪ್ರಹ್ಲಾದ್ ​ಜೋಷಿ ಅವರಿಗೆ ಮನವಿ ಮಾಡಿದ್ದೇನೆ

| ಎಸ್​.ಪಿ.ಮುದ್ದಹನುಮೇಗೌಡ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net