

ಸೇಡಂ: ಶಿಕ್ಷಣ ಪ್ರೇಮಿಗಳು, ಹಿರಿಯ ಮುತ್ಸದ್ದಿಗಳು ಹಾಗೂ ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ್ ಅವರು ಮೇ 6 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಸಹೋದರ ಹಾಗೂ ಸಹೋದರಿಯರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೇ 6 ರಂದು ಮಧ್ಯಾಹ್ನ 3.30 ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೋನಿ ಪಕ್ಕದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.