ಮಾಜಿ ಸಚಿವರ ಪುತ್ರ ಮತ್ತು ಪೆಡ್ಲರ್‌ಗಳು ಸಿಸಿಬಿ ಕಸ್ಟಡಿಗೆ

darshan lamani
Published on

ಬೆಂಗಳೂರು : ಡಾರ್ಕ್ ವೆಬ್‌ಸೈಟ್‌ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ, ಮತ್ತು ಆತನ ಸ್ನೇಹಿತರನ್ನು 9 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

ನ.4ರಲ್ಲಿ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ವಿದೇಶದಿಂದ ಪಾರ್ಸೆಲ್‌ನಲ್ಲಿ ಬಂದ ಡ್ರಗ್ಸ್ ಸ್ವೀಕರಿಸಲು ಮಾಜಿ ಸಚಿವರ ಪುತ್ರ ದರ್ಶನ್ ಲಮಾಣಿ ಮತ್ತು ಆತನ ಸ್ನೇಹಿತರಾದ ಹೇಮಂತ್, ಸುಜಯ್, ಸುನೀಶ್ ಮತ್ತು ಪ್ರಸಿದ್ಧ ಶೆಟ್ಟಿ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ಪಾರ್ಸಲ್ ಸ್ವೀಕರಿಸಲು ಬಂದ ಸುಜಯ್‌ನನ್ನು ಬಂಧಿಸಿದ್ದರು. ಆನಂತರ ತಲೆಮರೆಸಿಕೊಂಡಿದ್ದ ಸುನೀಶ್, ಆಶಿಶ್ ಮತ್ತು ಪ್ರಸಿದ್ಧ್ ಶೆಟ್ಟಿಯನ್ನು ಗೋವಾದಲ್ಲಿ ಬಂಧಿಸಿದ್ದರು.

ಕೆಂಪೇಗೌಡನಗರ ಪೊಲೀಸರು ಮೊದಲು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದು, ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದ್ದು, ಶುಕ್ರವಾರ ಎಲ್ಲ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net