ಮಾಜಿ ಸಚಿವ ಡಾ.ವೈ.ನಾಗಪ್ಪ ವಿಧಿವಶ

nagappa y
Published on

ದಾವಣಗೆರೆ: ಮಾಜಿ ಸಚಿವ ಡಾ.ವೈ.ನಾಗಪ್ಪ (88) ವಿಧಿವಶರಾಗಿದ್ದು, ಇಂದು ಸಂಜೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಹರಿಹರ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಇವರು, 3 ಬಾರಿ ಹರಿಹರದ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ, 1989, 1999, 2004ರ ಚುನಾವಣೆಯಲ್ಲಿ ಜಯ ಗಳಿಸಿದ್ದರು.

ಮೈಸೂರಿನಲ್ಲಿ ಎಂಡಿ ಅಧ್ಯಯನ ಮಾಡಿದ್ದ ಇವರು, ದಾವಣಗೆರೆ ಹಾಗೂ ಹರಿಹರದಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಸಮಾಜ ಕಲ್ಯಾಣ ಸಚಿವರ ಸ್ಥಾನ ನಿಭಾಯಿಸಿದ್ದ ಇವರು, ಕೆಎಸ್‌ಎಸ್‌ಐಡಿಸಿ, ಎಸ್ಸಿ-ಎಸ್ಟಿ ಬೋರ್ಡ್ ಛೇರ‍್ಮನ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net