

ಉಡುಪಿ: ರಾಜ್ಯದ 227 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಸಂಪೂರ್ಣ ಬರ ಪೀಡಿತ ಎಂದು ಕಂದಾಯ ಇಲಾಖೆ ಘೋಷಿಸಿ, 30 ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಎಂದು ತಿಳಿಸಿದೆ. ಆದರೂ ಸರಕಾರ ಕನಿಷ್ಟ ಐದು ಸಾವಿರ ಕೋಟಿಯನ್ನು ಬಿಡುಗಡೆ ಮಾಡಲಿಲ್ಲ. ತುರ್ತಾಗಿ ನೀರಾವರಿ, ಗೋಶಾಲೆಗಳಿಗೆ ನೆರವು ಮಾಡುವ ಬದಲಾಗಿ, ಕೇಂದ್ರ ಸರ್ಕಾರಕ್ಕೆ ವರದಿಕೊಟ್ಟಿದ್ದೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರೈತರಿಕೆ ಬೀಜ, ಗೊಬ್ಬರ ಇಲ್ಲದೆ ಕಂಗಾಲಾಗಿದ್ದಾರೆ. ಜನಪರವಾದ ಸರ್ಕಾರ ಎಂದುಕೊಂಡವರು ಅಧ್ಯಯನದಲ್ಲೇ ಕಾಲಕಳೆಯುತ್ತಿದ್ದಾರೆ. ಕೂಡಲೇ ಐದು ಸಾವಿರ ರುಪಾಯಿ ಬಿಡುಗಡೆ ಮಾಡಬೇಕು. , ದಿನಕ್ಕೆ ಏಳು ಗಂಟೆ ನೀಡುತ್ತಿದ್ದ ವಿದ್ಯುತ್ ಅನ್ನು 2 ಗಂಟೆಗೆ ಸೀಮಿತಗೊಳಿಸಿದ್ದಾರೆ. ಇದು ರೈತರಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಯಾಗಿದೆ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ
ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಸಿದ್ದು ಸರಕಾರ ಬಿಡುಗಡೆ ಮಾಡಿಲ್ಲ. ನೇರವಾಗಿ 54 ಲಕ್ಷ ರೈತರಿಗೆ ಅನ್ಯಾಯವಾಗಿದೆ. ರೈತರ ಖಾತೆಗೆ ಕನ್ನ ಹಾಕಿದ್ದಾರೆ ಎಂದವರು ತಿಳಿಸಿದರು.
ಪ.ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ 11,500 ಕೋಟಿ ರೂಪಾಯಿಗಳನ್ನು ಗ್ಯಾರೆಂಟಿ ಯೋಜನೆಗೆಂದು ಸರಕಾರ ಬಳಸಿಕೊಂಡಿದೆ. ಜನರ ಹಣದಲ್ಲಿ ಜನರಿಗೆ ಬಸ್, ವಿದ್ಯುತ್, ಅಕ್ಕಿ ಉಚಿತ ಕೊಡುತ್ತಿದ್ದಾರೆ. ಮಕ್ಕಳ ಶಿಕ್ಷಣ, ವಸತಿ ಗೆ ಮೀಸಲಾದ ಹಣ, ಬಳಕೆ ಮಾಡಿರೋದು ಅಕ್ಷಮ್ಯ ಅಪರಾಧ ಎಂದರು.
ಬಿಜೆಪಿ ಕಾರ್ಯಕರ್ತ ತನ್ನ ಸಾವಿಗೆ ಸಚಿವ ಶರಣಪ್ರಕಾಶ ಪಾಟೀಲ್ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅಂದು ಸಂತೋಷ್ ಡೆತ್ ನೋಟ್ ಬರೆದಾಗ, ಈಶ್ವರಪ್ಪ ರಾಜಿನಾಮೆ ಕೊಟ್ಟಿದ್ದರು. ಈಶ್ಚರಪ್ಪ ಮಂತ್ರಿಯಾಗಿ ಮುಂದುವರಿಯಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು, ಈಗ ಶರಣಪ್ರಕಾಶ ಪಾಟೀಲ್ ಸಚಿವರಾಗಿ ಮುಂದುವರಿಯಬಹುದಾ? ಕರ್ನಾಟಕದಲ್ಲಿ ಎರಡು ನ್ಯಾಯ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.