ಕನಕಪುರ ನಿವಾಸದಲ್ಲಿ ಮಾಜಿ ಸಚಿವ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ; ಕೋರ್ಟ್​ ಅನುಮತಿ ಮೇರೆಗೆ ವಿಚಾರಣೆ

DKS
Published on

ಕನಕಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರ ತಾಯಿ ಗೌರಮ್ಮ ಅವರನ್ನು ಇಡಿ ವಿಚಾರಣೆ ನಡೆಸಲಿದೆ. ಕನಕಪುರದಲ್ಲಿರುವ ಅವರ ನಿವಾಸದಲ್ಲಿ ವಿಚಾರಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಕನಕಪುರಕ್ಕೆ ಮಾಜಿ ಸಚಿವ ಹೊರಟಿದ್ದಾರೆ. ಈಗಾಗಲೇ ಶಿವಕುಮಾರ್​, ಪತ್ನಿ ಮತ್ತು ಮಗಳನ್ನು ವಿಚಾರಣೆ ಮಾಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು. ಈಗ ತಾಯಿ ಗೌರಮ್ಮ ಅವರನ್ನು ವಿಚಾರಣೆ ಮಾಡಲಿದೆ.

ವಿಚಾರಣೆಗಾಗಿ ದೆಹಲಿಗೆ ಬರುವಂತೆ ಕರೆದಿದ್ದ ಇಡಿ ಅಧಿಕಾರಿಗಳು. ವಯಸ್ಸು ಮತ್ತು ಆನಾರೋಗ್ಯ ಕಾರಣ ಕೊಟ್ಟು ಕನಕಪುರದಲ್ಲಿ ವಿಚಾರಣೆ ಮಾಡುವಂತೆ ಮನವಿ ಮಾಡಲಾಗಿತ್ತು.

ಮಾಜಿ ಸಚಿವರ ಮನವಿಯನ್ನು ಅಂಗೀಕರಿಸಿದ ಕೋರ್ಟ್​ ಕನಕಪುರದಲ್ಲಿ ವಿಚಾರಣೆ ಮಾಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕನಕಪುರದ ಡಿಕೆಶಿ ನಿವಾಸದಲ್ಲಿ ವಿಚಾರಣೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net