ರಾಷ್ಟ್ರೀಯವಾದದಿಂದ ಜಾತಿವಾದದತ್ತ ರಾಜ್ಯ ಬಿಜೆಪಿ: ಈಶ್ವರಪ್ಪ

udp-28-eshwarappa
Published on

ಉಡುಪಿ: ಬಿಜೆಪಿಯಲ್ಲಿ ದೇಶಕ್ಕೊಂದು, ರಾಜ್ಯಕ್ಕೊಂದು ವ್ಯತಿರಿಕ್ತ ಸಿದ್ಧಾಂತವಿದೆ. ದೇಶದಲ್ಲಿ ಹಿಂದುತ್ವದ ಸಿದ್ಧಾಂತದಲ್ಲಿ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದುತ್ವದ ವಿಚಾರಕ್ಕೆ ತಿಲಾಂಜಲಿ ನೀಡಲಾಗಿದೆ. ರಾಷ್ಟ್ರೀಯವಾದದಿಂದ ಜಾತಿವಾದದತ್ತ ಹೊರಳುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಪ್ಪ-ಮಕ್ಕಳ ಕೈಗೆ ಬಿಜೆಪಿ ಸಿಕ್ಕಿಬಿಟ್ಟಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಹಿಂದೆ ಮುಂದೆ ಸುತ್ತುವವರಿಗೆ ಟಿಕೇಟ್​ ನೀಡಲಾಗುತ್ತಿದೆ. ಜನಸಂಘ ಮತ್ತು ಆರ್​ ಎಸ್​ ಎಸ್​ ಕಾರ್ಯಕರ್ತರ ತಪಸ್ಸು ಒಂದು ಕುಟುಂಬಕ್ಕೆ ಬಲಿಯಾಗಿದೆ ಎಂದು ಹೇಳಿದರು.

30 ವರ್ಷದಿಂದ ಬಿಜೆಪಿಗೆ ನಿಷ್ಠ್ಠರಾಗಿದ್ದವರನ್ನು ಪಕ್ಕಕ್ಕೆ ಸರಿಸಿ, ಎಡಪಂಥೀಯ ಹಾಗೂ ಹಿಂದು ವಿರೋಧಿ ಶಾಂತಿ ನಡಿಗೆಯ ನೇತೃತ್ವ ವಹಿಸಿದವರಿಗೆ ಜಾತಿ ಕಾರಣಕ್ಕಾಗಿ ಟಿಕೆಟ್​ ಕೊಡಲಾಗಿದೆ. ಬಿಜೆಪಿ ಸಾಮೂಹಿಕ ನೇತೃತ್ವದ ಬದಲು ಕುಟುಂಬದ ಕೈಗೆ ಹೋಗಿದೆ. ಕೇಂದ್ರ ನಾಯಕರಿಗೆ ಪಕ್ಷದ ಗೆಲುವುಗೆ ಯಡಿಯೂರಪ್ಪ ಅಗತ್ಯವೆಂಬ ಭ್ರಮೆ ಮೂಡಿಸಲಾಗಿದೆ ಬಿಜೆಪಿ ಶುದ್ಧೀಕರಣವಾಗಬೇಕು. ಇದಕ್ಕಾಗಿ ನಾನೂ ಲೋಕಸಭಾ ಚುನಾವಣೆಗೆ ಹಾಗೂ ರುಪತಿ ಭಟ್​ ಅವರು ಪದವೀಧರ ಚುನಾವಣೆಗೆ ಸ್ಪರ್ಧಿಸಿದ್ದೇವೆ. ನಮ್ಮದು ವೈಚಾರಿಕ ಸಂರ್ಷ ಎಂದು ಹೇಳಿದರು.

ಕೃಷ್ಣನ ಮುಂದೆ ಪ್ರಮಾನ ಮಾಡಲಿ!
ಲೋಕಸಭಾ ಚುನಾವಣೆಯಲ್ಲಿ ರಘುಪತಿ ಭಟ್​ ಅವರಿಗೆ ಶಿವಮೊಗ್ಗ ಉಸ್ತುವಾರಿ ಕೊಡಲಾಗಿತ್ತು. 42 ದಿನ ಶಿವಮೊಗ್ಗದ ಹಳ್ಳಿ ಹಳ್ಳಿಯಲ್ಲಿ ಅವರು ಸುತ್ತಾಟ ನಡೆಸಿ ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಅಪ್ಪ ಮತ್ತು ಮಕ್ಕಳು ನಿಮಗೇ ಪರಿಷತ್ತು ಟಿಕೆಟ್​ ಎಂದು ನಂಬಿಸಿ ಕೆಲಸ ಮಾಡಿಸಿದರು. ಈ ಮಾತು ಸುಳ್ಳು ಎಂದಾದರೆ ನಾವು ಭಟ್ರಿಗೆ ಮಾತು ಕೊಡಲಿಲ್ಲ ಎಂದು ಕೃಷ್ಣ್ಣಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ರಾಯಣ್ಣ ಬ್ರಿಗೇಡ್​ ಬಗ್ಗೆ ಚರ್ಚೆ
ಹಿಂದುಳಿದ ದಲಿತರನ್ನು ಒಟ್ಟಾಗಿ ಸೇರಿಸಬೇಕು ಎಂಬ ಉದ್ದೇಶದಿಂದ ರಾಯಣ್ಣ ಬ್ರಿಗೇಡ್​ ಶುರು ಮಾಡಲಾಗಿತ್ತು. ಕೂಡಲ ಸಂಗಮದಲ್ಲಿ ನಡೆದ ಬೃಹತ್​ ಸಮಾವೇಶದಿಂದ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು. ನಂತರ ಅಮಿತ್​ ಶಾ ಬೇಡ ಎಂದಿದ್ದಕ್ಕೆ ರ್ಬಕಾಸ್ತು ಮಾಡಿದೆ. ಈಗ ಮತ್ತೆ ರಾಯಣ್ಣ ಬ್ರಿಗೇಡ್​ ರಚನೆ ಬಗ್ಗೆ ರಾಜ್ಯದ ಪ್ರಮುಖ ನಾಯಕರೊಂದಿಗೆ ಕೂತು ಚರ್ಚೆ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​, ಮುಖಂಡರಾದ ಶಿವರಾಮ ಉಡುಪ, ಉಮೇಶ್​ ಆರಾಧ್ಯ, ಮಹೇಶ್​ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net