ನೆಲದ ಋಣ ತೀರಿಸೋದು ಕನ್ನಡಿಗನ ಕರ್ತವ್ಯ; ಮಾಜಿ ಸಿಎಂ ಸಿದ್ದರಾಮಯ್ಯ

SIDDU
Published on

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಸಮ್ಮೇಳನದಲ್ಲಿ ಇಷ್ಟೊಂದು ಜನ ಸೇರಿರೋದು ನಿಜಕ್ಕೂ ಸಂಭ್ರಮದ ಸಂಗತಿ. ಕನ್ನಡ ಭಾಷೆ, ಕನ್ನಡಿಗರಿಗೆ, ನೆಲ-ಜಲಕ್ಕೆ ಯಾವತ್ತೂ ತೊಂದರೆ ಬರಲ್ಲ. ಕನ್ನಡ ನಾಡಿನ ನೆಲದ ಋಣ ತೀರಿಸೋದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದ ಅವರು, ನಾವೆಲ್ಲ ಈ ನೆಲದ ಮಕ್ಕಳು. ಕನ್ನಡ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಯಾರೇ ಹೊರಗಡೆಯಿಂದ ಬಂದರೂ ಕನ್ನಡಿಗರಾಗಿ ಬಾಳಬೇಕಾದ ವಾತಾವರಣ ಸೃಷ್ಟಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡ ಆಡಳಿತ ಭಾಷೆಯಾಗದ ಹೊರತು ಬೇರೆ ಯಾವ ಭಾಷೆಗೂ ಅವಕಾಶವಿಲ್ಲ.

ಕನ್ನಡ ಆಡಳಿತ ಭಾಷೆಯಾಗೋದರಲ್ಲಿ ಯಾವುದೇ ರಾಜಿಯಿಲ್ಲ ಎಂದರು. ಮನುಷ್ಯತ್ವಕ್ಕಿರಲಿ ಉದಾರತೆ. ಭಾಷೆ ವಿಷಯದಲ್ಲಿ ನಾವು ಕಠಿಣವಾಗಿಯೇ ಇರಬೇಕಾಗುತ್ತದೆ. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಕಲ್ಯಾಣ ಕರ್ನಾಟಕ ಕನ್ನಡದ ಗಂಡುಮೆಟ್ಟಿನ ನೆಲ. ಕನ್ನಡದ ಸಾರ್ವಭೌಮತೆಗೆ ಧಕ್ಕೆ ಬರದಂತೆ ನೋಡಿಕೊಳ್ಳೋದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಮೊಳಗಿದ ಮೋದಿ ಮೋದಿ...

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಮೋದಿ ಮೋದಿ ಎಂಬ ಘೊಷಣೆಗಳು ಕೇಳಿಸಿದವು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಿದ್ದರಾಮಯ್ಯ ಭಾಷಣ ಆರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net