

ಮೈಸೂರು: ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಂದೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಯಾಕೆ ಆಗಲಿಲ್ಲ ಅನ್ನೋದು ಎಚ್.ಡಿ.ದೇವೇಗೌಡರಿಗೆ ಚೆನ್ನಾಗಿ ಗೊತ್ತು. ಅವರೇ ಅದನ್ನು ಹೇಳಿದರೆ ಒಳಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾನುವಾರ ಸಿದ್ದರಾಮಯ್ಯನ ಹುಂಡಿಯಲ್ಲಿ ಹೇಳಿದ್ದಾರೆ.
ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ವಿರೋಧ ಮಾಡಿದ್ದು ನಾನಂತೂ ಅಲ್ಲ. ಯಾರು ಖರ್ಗೆಯವರ ಹೆಸರನ್ನು ತಿರಸ್ಕಾರ ಮಾಡಿದ್ದು ದೇವೇಗೌಡರೇ ಹೆಸರು ಹೇಳಲಿ, ಖರ್ಗೆ ಹೆಸರು ಪ್ರಸ್ತಾಪವಾದಾಗ ಅದನ್ನು ತಿರಸ್ಕರಿಸಿದ್ದು ಯಾರೆಂಬುದ ನನಗೆ ಗೊತ್ತಿಲ್ಲ. ಅಕಸ್ಮಾತ್ ದೇವೇಗೌಡರಿಗೆ ಗೊತ್ತಿದ್ರೆ ಅದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಹುಷಾರು.. ಹಾಲು ಹಾಲಾಹಲವಾಗಿದೆ ನೋಡಿ…
ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ದೇವೇಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಪಾಪ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೇನೆ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? ಜೆಡಿಎಸ್ ಪಕ್ಷದಲ್ಲಿ 6 ವರ್ಷ ಕಾಲ ರಾಜ್ಯಾಧ್ಯಕ್ಷನಾಗಿದ್ದು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ದೇವೇಗೌಡರಿಗೆ ಪ್ರಶ್ನೆ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..