

ಕಲಬುರಗಿ: ಟ್ರಂಪ್ ಜತೆ ಆ ದೇಶದಿಂದ ಹಾಲು ಆಮದು, ಕೃಷಿಗೆ ಧಕ್ಕೆ ತರುವಂಥ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಒಂದು ದೇಶದ ಅಧ್ಯಕ್ಷರು ಭಾರತಕ್ಕೆ ಬರುತ್ತಿದ್ದಾರೆ ಎಂದರೆ ಸ್ವಾಗತಿಸುವುದು, ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ಅವರು ಬರುವುದರಿಂದ ಏನೂ ಆಗಲ್ಲ. ದೇಶದ ಜನರ ಮೇಲೆ ಪರಿಣಾಮ ಬೀರುವಂಥ ಯಾವುದೇ ರೀತಿಯ ಒಡಂಬಡಿಕೆ ಮಾಡಿಕೊಳ್ಳಬಾರದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.