ಮಾಜಿ ಸಿಎಂ ನಾಯ್ಡು ಬಂಧನ ಖಂಡನೀಯ

STRIKE
ಕಂಪ್ಲಿಯ ಅಂಬೇಡ್ಕರ್ ವೃತ್ತದಲ್ಲಿ ನಾಯ್ಡು ಅಭಿಮಾನಿಗಳು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ ನಾಯ್ಡು ಪರ ಘೋಷಣೆ ಕೂಗಿದರು. ಅಭಿಮಾನಿಗಳಾದ ಚಿಗುರುಪಾಟಿ ರಾಮಬಸವೇಶ್ವರರಾವು, ಭಟ್ಟ ಪ್ರಸಾದ್, ಕೆ.ಎಸ್.ವಿ.ಬಿ.ಬಿ. ಸಾಯಿಬಾಬಾ, ಎಂ.ಸುಧೀರ್, ಅಲ್ಲು ಅಶ್ವತ್ಥನಾಯ್ಡು, ಕೆ.ಬಾಲಕೃಷ್ಣ, ಜಯಪ್ರಕಾಶ್, ಗುರ‌್ರಂ ಪ್ರಭಾಕರ ಇತರರಿದ್ದರು.
Published on

ಕಂಪ್ಲಿ: ಆಂಧ್ರಪ್ರದೇಶದ ಮಾಜಿ ಸಿಎಂ ನಾರಾ ಚಂದ್ರಬಾಬುನಾಯ್ಡು ಬಂಧನ ಖಂಡನೀಯ ಎಂದು ಇಲ್ಲಿನ ಚಂದ್ರಬಾಬು ನಾಯ್ಡು ಅಭಿಮಾನಿಗಳ ಬಳಗದ ಮುಖಂಡ ಚಿಗುರುಪಾಟಿ ರಾಮಬಸವೇಶ್ವರರಾವು ಆಕ್ರೋಶ ವ್ಯಕ್ತಪಡಿಸಿದರು.

ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿ, ನಾಯ್ಡು ಬಂಧನ ಅಕ್ರಮವಾಗಿದ್ದು ರಾಜಕೀಯ ಪ್ರೇರಿತವಾಗಿದೆ. ನಾಯ್ಡು ದೂರದೃಷ್ಟಿಯ ಜನಪರ ಹಾಗೂ ಆಧುನಿಕ ತಂತ್ರಜ್ಞಾನವನ್ನು ಆಂಧ್ರಕ್ಕೆ ಪರಿಚಯಿಸುವ ಮೂಲಕ ಲಕ್ಷಾಂತರ ಯುವಕರ ಉದ್ಯೋಗ ಸೃಷ್ಟಿಗೆ ಕಾರಣರಾದ ಸೃಜನಶೀಲ ಸಿಎಂ ಆಗಿದ್ದಾರೆ.

ಉದ್ಯೋಗ ಸೃಷ್ಟಿ

ಮಾಜಿ ಸಿಎಂ ಅಕ್ರಮ ಬಂಧನದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಭಾಗಿಯಾಗಿದೆ. ಕೂಡಲೇ ಸಿಎಂ ಬಂಧನ ಮುಕ್ತಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಅಭಿಮಾನಿ ಬಳಗದ ಮುಖಂಡ ಭಟ್ಟ ಪ್ರಸಾದ್ ಮಾತನಾಡಿ, ನಿರ್ದೋಷಿ ನಾಯ್ಡು ಬಂಧನವನ್ನು ಜಗತ್ತಿನಾ
ದ್ಯಂತ ಇರುವ ಆಂಧ್ರ ನಿವಾಸಿಗಳು ಖಂಡಿಸುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ. ನಿರ್ದೋಷಿ ನಾಯ್ಡು ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆ ಎಂದು ಆಗ್ರಹಿಸಿದರು.

ಇದನ್ನೂ ಓದಿ: ನಗರದಲ್ಲಿ ಗಮನಸೆಳೆದ ಬೃಹತ್ ಬೈಕ್ ರ್ಯಾಲಿ: ಮಧುಚಂದನ್ ನೇತೃತ್ವದಲ್ಲಿ ಚುನಾವಣಾ ಪ್ರಚಾರ
ಇದಕ್ಕೂ ಮುನ್ನ ಕಮ್ಮವಾರಿ ಸಂಘದ ಬಳಿಯ ಈರಣ್ಣ ದೇವಸ್ಥಾನದಲ್ಲಿ ನಾಯ್ಡು ಬಿಡುಗಡೆಗೆ ಸಂಕಲ್ಪಿಸಿ 101ಇಡುಗಾಯಿ ಒಡೆದರು. ಅಲ್ಲಿಂದ ನೂರಾರು ಬೈಕ್‌ಸವಾರರು ಬೈಕ್ ರ್ಯಾಲಿ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿದರು. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಮೇಲೆ ಕುಳಿತು ಕೆಲ ಹೊತ್ತು ಪ್ರತಿಭಟಿಸಿ ಘೋಷಣೆ ಕೂಗಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.


ನಾಯ್ಡು ಅಭಿಮಾನಿಗಳಾದ ಪಿ.ಶ್ರೀನಿವಾಸುಲು, ಚಲ್ಲಾ ವಾಸುದೇವನಾಯ್ಡು, ಪಿ.ಬ್ರಹ್ಮಯ್ಯ, ಎನ್.ಪುರುಷೋತ್ತಮ, ಕೆ.ಎಸ್.ಚಾಂದ್ ಬಾಷಾ, ಗೋಪಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net