

ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ಬಡವರು, ಶ್ರೀಮಂತರು ಬದುಕುತ್ತಿದ್ದಾರೆ. ಆದರೆ, ವೈಚಾರಿಕ ಹೊಂದಾಣಿಕೆ ಇಲ್ಲದಿರುವ ಕಾರಣ ನಾವು ದೇವರನ್ನು ಗುರತಿಸಿಕೊಳ್ಳಲು ಸಾಧ್ಯವಾಗಿಲ್ಲಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಹಿಂದವಾಡಿಯ ಅಕಾಡೆಮಿ ಆಫ್ ಕಂಪೇರಿಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ ಗುರುದೇವ ರಾನಡೆ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಆರ್.ಡಿ.ರಾನಡೆ 66ನೇ ಪುಣ್ಯ ತಿಥಿ ಅಂಗವಾಗಿ ಎಸಿಪಿಅರ್ ನವೀಕೃತ ಕಟ್ಟಡ ಲೋಕಾರ್ಪಣೆಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಂದಾಣಿಕೆ ಬದುಕು ಕಟ್ಟಕಟ್ಟಿಕೊಂಡ ಹೊಸ ಜಗತ್ತನ್ನು ನೋಡಬಹುದು. ದೇವರು ನಮ್ಮ ಸೃಷ್ಟಿ ಕೃತಹೌದು. ಹಾಗಂತ ಅವನು ಸೃಷ್ಟಿ ಮಾಡಿ ಕೈ ಬಿಡಲಿಲ್ಲ. ನಮ್ಮ ಜತೆಯಲ್ಲಿದ್ದಾನೆ. ಆದರೆ, ನಾವು ಅವನನ್ನು ಗುರುತಿಸುವ ಬದಲು ಹುಡುಕು ಕೆಲಸ ಮಾಡುತ್ತಿದ್ದೇನೆ.
ನಾನು ಕಲಿತಿದ್ದು ಇಂಜಿನಿಯರಿಂಗ್ ವೃತ್ತಿಯಲ್ಲಿ ರಾಜಕಾರಣಿ ಆಗಿರುವುದರಿಂದ ಅರ್ಥಶಾಸ್ತ್ರ, ತತ್ವಶಾಸ್ತ್ರ ಆಡಳಿತ ನಡೆಸಲು ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಈ ಎರಡು ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದರು.