ಬಸ್​ನಲ್ಲಿ ಮದ್ಯದ ಬಾಟಲಿ ಕೊಂಡೊಯ್ಯಲು ಅನುಮತಿ ನೀಡಿ: ಮಾಜಿ ಸೈನಿಕರ ಮನವಿ

27GDG06
Published on

ವಿಜಯವಾಣಿ ಸುದ್ದಿಜಾಲ ಗದಗ
ಹಾಲಿ ಮಾಜಿ ಸೈನಿಕರಿಗೆ ಮಿಲಿಟರಿ ಕ್ಯಾಂಟೀನ್​ ಮೂಲಕ ಅಧಿಕೃತವಾಗಿ ನೀಡುತ್ತಿರುವ ಮಾಸಿಕ ಮದ್ಯದ ಬಾಟಲಿಗಳನ್ನು ಸಾರಿಗೆ ಬಸ್​ನಲ್ಲಿ ಕೊಂಡೊ ಯ್ಯಲು ಅನುಮತಿ ನೀಡಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದ ಜಿಲ್ಲಾ ಟಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ಜಿಲಾಧ್ಯ ಬಸಲಿಂಗಪ್ಪ ಮುಂಡರಗಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಲಿ&ಮಾಜಿ ಸೈನಿಕರ ಕುಟುಂಬಕ್ಕೆ ಮಾಸಿಕ ಇಂತಿಷ್ಟು ಎಂದು ಮದ್ಯವನ್ನು ಪೂರೈಕೆ ಮಾಡಲಾಗುತ್ತಿದೆ. ಸೇನೆಯಲ್ಲಿ ಹಾಲಿ ಇರುವ ಸೈನಿಕರ ಕುಟುಂಬವು ತಮ್ಮೂರಲ್ಲಿದ್ದಾಗ ಹಾಗೂ ಹಾಗೂ ಮಾಜಿ ಸೈನಿಕರ ಕುಟುಂಬದ ಸದಸ್ಯರು ಸೇರಿ ತಮಗೆ ಸಮೀಪದ ಆಮಿರ್ ಕ್ಯಾಂಟೀನ್​ ಮೂಲಕ ನಿತ್ಯ ಬೇಕಾಗುವ ಆಹಾರ ಧಾನ್ಯ, ವಿವಿಧ ವಸ್ತು ಸೇರಿ ಖರೀದಿಸುತ್ತಾರೆ. ಜೊತೆಗೆ ಒಂದು ಹಾಲಿ ಅಥವಾ ಮಾಜಿ ಸೈನಿಕರ ಕುಟುಂಬ ಮಾಸಿಕ ಇಂತಿಷ್ಟು ಮದ್ಯ ಪಡೆಯಬಹುದು ಎಂದು ನಿಗದಿ ಮಾಡಿದೆ. ಆದರೆ, ಈಚೆಗೆ ಹುಬ್ಬಳ್ಳಿಯಿಂದ ಗದುಗಿಗೆ ಬರುತ್ತಿದ್ದ ಮಾಜಿ ಸೈನಿಕರ ಕುಟುಂಬವೊಂದು ಎಂದಿನಂತೆ ಸಾರಿಗೆ ಬಸ್​ನಲ್ಲಿ ತಮಗೆ ಅಧಿಕೃತವಾಗಿ ಹಂಚಿಕೆಯಾದ ಮದ್ಯದ ಬಾಟಲಿ ಸೇರಿ ಅಗತ್ಯ ವಸ್ತುಗಳನ್ನು ತರುತ್ತಿದ್ದ ಸಂದರ್ಭದದಲ್ಲಿ ಬಸ್​ ನಿರ್ವಾಹಕ ಮದ್ಯದ ಬಾಟಲಿ ಎಂದು ಪರೀಸಿ, ಅವರನ್ನು ನಡುರಸ್ತೆಯಲ್ಲಿಯೇ ಇಳಿಸಿದ್ದಾನೆ ಎಂದು ಆರೋಪಿಸಿದ ಅವರು, ಇಂತಹ ಗಟನೆ ಮರುಕಳಿಸದಂತೆ ಮತ್ತು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾಗಿ ತಿಳಿಸಿದರು.
ಸಂದ ಗೌರವಾಧ್ಯ ವಾಸಪ್ಪ ಶೆಟವಾಜಿ, ನರಸಿಂಹ ಸ್ವಾಮಿ ದೇವಾಂಗಮಠ, ಪ್ರಧಾನ ಕಾರ್ಯದಶಿರ್ ರವಿಕುಮಾರ ಜಂಗಮನಿ, ಪ್ರಕಾಶ ಬಂಡಿಹಾಳ, ದ್ಯಾಮನಗೌಡ ದಿಡ್ಡಿಮನಿ, ಶ್ರೀನಿವಾಸ ವಾಲ್ಮೀಕಿ, ಶಿಲ್ಪಾ ಬಂಡಿಹಾಳ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net