

ರಾಮದುರ್ಗ: ಸರ್ಕಾರ ಹಾಗೂ ಸಮಾಜದ ಹೊಂದಾಣಿಕೆ ಸಮಸ್ಯೆಯಿಂದ ಮದ್ಯ ನಿಷೇಸಲು ಸಾಧ್ಯವಾಗಿಲ್ಲ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೈ.ಎಚ್. ಪಾಟೀಲ ಹೇಳಿದರು.
ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಕಾರದೊಂದಿಗೆ ಸೋಮವಾರ ಏರ್ಪಡಿಸಿದ್ದ 1715ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮದ್ಯದ ಚಟಕ್ಕೆ ಅಂಟಿಕೊಂಡ ಹಲವು ಕುಟುಂಬ ನೆಮ್ಮದಿ ಕಳೆದುಕೊಂಡಿವೆ. ಅಂತಹ ಕುಟುಬಂಗಳ ನೆರವಿಗೆ ನಿಂತ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ನಾಡಿನಾದ್ಯಂತ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ಕುಟುಂಬಗಳು ನೆಮ್ಮದಿ ಜೀವನ ನಡೆಸುತ್ತಿವೆ. ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅಶೋಕ ಕುಲಗೋಡ, ಜಿಲ್ಲಾ ಉಪಾಧ್ಯಕ್ಷ ರಮೇಶ ಜಲಗೇರಿ, ಸದಸ್ಯ ರುದ್ರಪ್ಪ ವಜ್ಜರಮಟ್ಟಿ, ಜಿ.ಬಿ. ರಂಗನಗೌಡ್ರ, ಪತ್ರಕರ್ತ ರಾಮಚಂದ್ರ ಯಾದವಾಡ, ನಿವೃತ್ತ ಶಿಕ್ಷಕ ಸುರೇಶ ಕಲ್ಲೂರ ಮತ್ತು ಸುನ್ನಾಳ ೀರ ಮಾರುತಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಎಂ. ಪಾಟೀಲ ಮಾತನಾಡಿದರು.
ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯೋಜನಾಕಾರಿ ಸಚಿನ ಸ್ವಾಗತಿಸಿದರು. ಮೇಲ್ವಿಚಾರಕ ಬಸಪ್ಪ ನಿರೂಪಿಸಿದರು. ಮೇಲ್ವಿಚಾರಕ ಸಂತೋಷ ವಂದಿಸಿದರು.