ಅನಿಷ್ಟ ಪದ್ಧತಿ ಹೋಗಲಾಡಿಸಲು ಯತ್ನ

21 Hanumasagara 1
ಹನುಮಸಾಗರ ಸಮೀಪದ ಹನಮನಾಳದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಗ್ರಾಪಂ ಸದಸ್ಯರಾದ ಸಂತೋಷ ಕೆಂಚೆರ್, ಗಿರೀಶ ಕುಲಕರ್ಣಿ, ಚಂದ್ರು ಶಾಂತಗೇರಿ, ಮುಖಂಡರಾದ ಕರಿಯಪ್ಪ ಹಡಪದ, ಹೊನ್ನಪ್ಪ ಹಡಪದ, ಮುದಕಪ್ಪ ಹಡಪದ, ಫಕೀರಪ್ಪ ಹಡಪದ, ಮಂಜು ಹಡಪದ ಇತರರಿದ್ದರು.
Published on

ಹನುಮಸಾಗರ: ಹಡಪದ ಅಪ್ಪಣ್ಣ ಅವರು ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.

ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಹಡಪದ ಅಪ್ಪಣ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅಪ್ಪಣ್ಣನವರು ನಿರಂತರ ಶ್ರಮಿಸಿದ್ದಾರೆ ಎಂದರು.

ಗ್ರಾಪಂ ಸದಸ್ಯರಾದ ಶ್ರೀಶೈಲ್ ಮೋಟಗಿ, ಮಂಜುನಾಥ ಹುಲ್ಲೂರ, ಬಸವರಾಜ ದ್ಯಾವಣ್ಣನವರ, ಮರೇಗೌಡ ಬೋದುರ, ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಮೈಬೂಬ ಇಟಗಿ, ಮುಖಂಡರಾದ ನಾಗರಾಜ ಕಂದಗಲ್, ಮೌಲಿ ಮೋಟಗಿ, ಯಮನೂರ ಹಡಪದ, ಹನುಮಂತ ಹಡಪದ, ರಾಮಣ್ಣ ಬಂಡಿವಡ್ಡರ, ಇಸ್ಮಾಯಿಲ್ ಇತರರಿದ್ದರು.

ಹನಮನಾಳ: ಗ್ರಾಮದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.ಪ್ರಮುಖರಾದ ಗುರುರಾಜ ಹಡಪದ, ಭೀಮಪ್ಪ ಹಡಪದ, ಶಿವಕುಮಾರ ಹಡಪದ, ಶರಣು ಹಡಪದ, ಗವಿ ಹಡಪದ, ವೀರೇಶ ಹಡಪದ, ಮಹಾಂತೇಶ ಹಡಪದ, ಪ್ರಕಾಶ ಹಡಪದ, ಪರಸಪ್ಪ ಹಡಪದ, ಮಹಾಗುಂಡಪ್ಪ ಹಡಪದ, ಮಲ್ಲು ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net