ಎವಿಡೆನ್ಸ್ ಸಿನಿಮಾ 24ರಂದು ತೆರೆಗೆ

Published on

ಮೈಸೂರು: ಶ್ರೀಧೃತಿ ಪ್ರೊಡಕ್ಷನ್ ಅರ್ಪಿಸಿ ಸಿ.ಪಿ. ಪ್ರವೀಣ್ ನಿರ್ದೇಶನದ ಎವಿಡೆನ್ಸ್ ಸಿನಿಮಾ ಮೇ 24ರಂದು ತೆರೆ ಕಾಣಲಿದೆ.
ವಿಚಾರಣಾ ಕೊಠಡಿಯಲ್ಲಿನ ಹಿನ್ನೆಲೆಯಲ್ಲಿ ತ್ರಿಕೋನ ಪ್ರೇಮಕಥೆ ಆಧಾರಿತ ಚಿತ್ರ ಇದಾಗಿದೆ. ಒಟ್ಟು 4 ಹಾಡುಗಳೊಂದಿಗೆ ಹೊಡೆದಾಟದ ದೃಶ್ಯಗಳೂ ಇವೆ. ಸುಮಾರು 5 ಪುಟದ ಸಂಭಾಷಣೆ ಒಂದೇ ದೃಶ್ಯದಲ್ಲಿ ಹೇಳುವಂತಹ ಸವಾಲಿನ ದೃಶ್ಯಗಳನ್ನೂ ಈ ಚಿತ್ರ ಒಳಗೊಂಡಿದೆ ಎಂದು ಚಿತ್ರದ ನಾಯಕಿ ಮಾನಸಾ ಜೋಷಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ. ತಮಗೆ ಈ ಚಿತ್ರ ಅಪೂರ್ವ ಅನುಭವ ನೀಡಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುವ ಸಿನಿಮಾ ಇದಾಗಿದೆ ಎಂದರು.
ನಿರ್ದೇಶಕ ಸಿ.ಪಿ. ಪ್ರವೀಣ್ ಮಾತನಾಡಿ, ತನಿಖೆಯ ಎಳೆಯಲ್ಲಿ ಈ ಚಿತ್ರ ಸಾಗುತ್ತದೆ. ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣವಾಗಿದೆ. ರಾಜ್ಯಾದ್ಯಂತ ಸುಮಾರು 40 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ವಿವರಿಸಿದರು.
ರವಿ ಸುವರ್ಣ ಛಾಯಾಗ್ರಹಣ, ಆರೋನ್ ಕಾರ್ತಿಕ್ ಸಂಗೀತ, ಶೇಷಾಚಲ ಕುಲಕರ್ಣಿ ಸಂಕಲನ, ಕ್ರಿಸ್ಟೋಫರ್ ಜಾಯ್ಸನ್ ಹಿನ್ನೆಲೆ ಸಂಗೀತ, ಆರ್. ಚಂದ್ರಶೇಖರ ಪ್ರಸಾದ್, ಹನುಮಯ್ಯ ಬಂಡಾರು ಸಂಭಾಷಣೆ ಬರೆದಿದ್ದಾರೆ. ರೋಬೋ ಗಣೇಶನ್, ಮಾನಸಾ ಜೋಶಿ, ಆಕರ್ಷಆದಿತ್ಯ, ರಚಿತಾ, ಪೂಜಿತಾ, ಕಾರ್ತಿಕ್ ವರ್ಣೇಕರ್, ಚಮಕ್ ಚಂದ್ರ, ಆರಾಧ್ಯ ಶಿವಕುಮಾರ, ರೇಣು ಶಿಕಾರಿ, ಪವನ್ ಸುರೇಶ್ ಚೆನ್ನೈ ಇತರರು ನಟಿಸಿದ್ದಾರೆ ಎಂದು ತಿಳಿಸಿದರು.
ಚಿತ್ರದ ನಿರ್ಮಾಪಕರಾದ ಮಾದೇಶ ಕೋಡಿಹಳ್ಳಿ, ಪ್ರದೀಪ್, ಅರವಿಂದ ಕುಮಾರ್, ಚಿತ್ರತಂಡದ ಆಕರ್ಷ ಆದಿತ್ಯ, ಕಾರ್ತಿಕ್ ವರ್ಣೇಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net