

ಚನ್ನಮ್ಮನ ಕಿತ್ತೂರು: ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜ.22ರಂದು ಜರುಗಲಿದ್ದು, ಅಂದು ಮನೆ, ಮಠ, ಮಂದಿರಗಳಲ್ಲಿ ಎಲ್ಲರೂ ರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಬೇಕು ಎಂದು ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್. ಶಾಮಸುಂದರ ಗಾಯಕವಾಡ ಹೇಳಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವರ್ತುಲಕ್ಕೆ ಶನಿವಾರ ಆಗಮಿಸಿದ ಶ್ರೀರಾಮ ರಥದ ಯಾತ್ರೆ ನೇತೃತ್ವ ವಹಿಸಿ ಮಾತನಾಡಿದರು. ಬನವಾಸಿಯಿಂದ ಪ್ರಾರಂಭವಾದ ರಥವು ಬೆಳಗಾವಿ, ಖಾನಾಪುರ, ಮುರ್ಡೇಶ್ವರ ಮಾರ್ಗವಾಗಿ ಸಂಚರಿಸಿ ಶಿರಸಿಯಲ್ಲಿ ಜ.22ರಂದು ಶ್ರೀರಾಮನ ಸಮಾವೇಶ ಮಾಡುತ್ತೇವೆ. ಅಂದು ಎಲ್ಲರೂ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮುಂಡಗೋಡ ಸಾಲಗಾಂವ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಹಿಂದೆ ರಾಮರಾಜ್ಯ ಸ್ಥಾಪನೆಗೊಂಡ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಲಾಗುವುದು. ಅದರ ಅಂಗವಾಗಿ ಶ್ರೀರಾಮನ ರಥವು ಎಲ್ಲೆಡೆ ಸಂಚರಿಸುತ್ತಿದೆ. ಜ. 22 ರಂದು ಹಬ್ಬದ ವಾತಾವರಣವೇ ನಿರ್ಮಾಣವಾಗಲಿದೆ. ಪ್ರತಿ ಹಳ್ಳಿಗಳಲ್ಲಿಯೂ ರಾಮರಥದ ಜತೆಗೆ ಶ್ರೀರಾಮನ ಜಯ ೋಷಗಳನ್ನು ಕೂಗುತ್ತ ಹೋಗಲಾಗುವುದು ಎಂದರು.
ಸರಸ್ವತಿ ಹೈಬತ್ತಿ ಮಾತನಾಡಿದರು. ಬಸವರಾಜ ಹೈಬತ್ತಿ, ಉಮೇಶ ಕಿತ್ತೂರ, ಶಿವಾಜಿರಾವ ಗಾಯಕವಾಡ, ಕುನಾಲಗೋವಿಂದ, ತಿಲಕಚಂದನ ಗಾಯಕವಾಡ, ಮಾರುತಿ ಹಟ್ಟಿವಳಿ, ಯಲ್ಲಪ್ಪ ಆರೇರ, ಮಡಿವಾಳಿ ಪಾಟೀಲ, ವಸಂತಿ ಬೇಕವಾಡಕರ ಉಪಸ್ಥಿತರಿದ್ದರು.