ಎಲ್ಲೆಡೆ ಶಾಂತಿ ನೆಲೆಸಲಿ

web4
ಸವದತ್ತಿಯಲ್ಲಿ ಶಾಸಕ ವಿಶ್ವಾಸ ವೈದ್ಯ ಅವರನ್ನು ಮುಸ್ಲಿಂ ಸಮುದಾಯದಿಂದ ಸನ್ಮಾನಿಸಲಾಯಿತು. ಮೌಲಾನಾ ಇಮ್ತಿಯಾಜ್ ಅತ್ತಾರ, ಮೌಲಾನಾ ಇಲಿಯಾಸ್ ಮುನವಳ್ಳಿ, ಹಾಫೀಜ್ ಅಬ್ದುಲ್‌ಖಾದಿರ್ ಇತರರು ಇದ್ದರು.
Published on

ಸವದತ್ತಿ: ಪ್ರವಾದಿ ಮಹಮ್ಮದ್ ಪೈಗಂಬರ್ ಜೀವನ, ಶಾಂತಿ ಸಂದೇಶಗಳು ಎಲ್ಲೆಡೆ ಪಸರಿಸಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ಶಾದಿ ಮಹಲ್‌ನಲ್ಲಿ ಈಚೆಗೆ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದವರು ನನ್ನ ಗೆಲುವಿಗಾಗಿ ಶ್ರಮಿಸಿದ್ದು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ. ನಾನು ಎಲ್ಲ ಸಮುದಾಯದ ಸೇವಕ. ಬುದ್ಧ, ಬಸವಣ್ಣ, ಅಂಬೇಡ್ಕರ್ ಕನಸು ನನಸು ಮಾಡಲು ಆದಷ್ಟು ಶ್ರಮಿಸುವೆ ಎಂದರು.

ಮೌಲಾನಾ ಇಮ್ತಿಯಾಜ್ ಅತ್ತಾರ, ಮೌಲಾನಾ ಇಲಿಯಾಸ್ ಮುನವಳ್ಳಿ, ಹಾಫೀಜ್ ಅಬ್ದುಲ್‌ಖಾದಿರ್ ಅತ್ತಾರ್ ಸಾನ್ನಿಧ್ಯ ವಹಿಸಿದ್ದರು. ಕೆ.ಕೆ.ಪುಣೇದ, ಕ್ರುಸಾಬ ನದಾಫ್, ಎಂ.ಎಚ್.ಮುಲ್ಲಾನವರ, ಎಸ್.ಎಂ. ಸಂಗ್ರೇಶಕೊಪ್ಪ, ಮೌಲಾಸಾಬ ತಬ್ಬಲಜಿ, ದಿಲಾವರ್ ಸನದಿ, ಅಬ್ದುಲ್‌ಲತೀಫ್ ಸವದತ್ತಿ, ಬಾಬುಸಾಬ ನಾಶಿಪುಡಿ, ಮಕ್ತುಮ್ ಇಮಾಮನಾಯ್ಕ, ಕ್ರುಸಾಬ ಜಡಮನಿ, ವಸೀಂ ಮುಲ್ಲಾ, ಷಹಜಾನ್ ಸಂಗೊಳ್ಳಿ, ರಿಯಾಜ್ ಸವದತ್ತಿ, ಬಾಬು ಬಾಗೋಜಿಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net