ಎಲ್ಲೆಡೆ ಮೊಳಗಿದ ಬಸವೇಶ್ವರ ನಾಮಸ್ಮರಣೆ

27Anand2
ಜಗಜ್ಯೋತಿ ಬಸವಣ್ಣನವರ ಜಯಂತಿ ಉತ್ಸವದ ನಿಮಿತ್ತ ನಗರದ ಬಸವೇಶ್ವರ ವತ್ತದಲ್ಲಿ ಬೈಕ್ ರ‌್ಯಾಲಿಗೆ ಭಾನುವಾರ ಚಾಲನೆ ನೀಡಲಾಯಿತು. ಗುರುಸಿದ್ಧ ಮಹಾಸ್ವಾಮೀಜಿ, ಡಾ.ಅಲ್ಲಮಪ್ರಭು, ಪ್ರಭಾಕರ ಕೋರೆ, ಜಗದೀಶ ಶೆಟ್ಟರ್, ಮಹಾಂತೇಶ ಕವಟಗಿಮಠ ಇತರರಿದ್ದರು.
Published on

ಬೆಳಗಾವಿ: ವಿಶ್ವಕ್ಕೆ ಸಮಾನತೆ ದಿವ್ಯ ಸಂದೇಶ ಸಾರಿದ ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವದ ನಿಮಿತ್ತ ನಗರದಲ್ಲಿ ಭಾನುವಾರ 15ಕ್ಕೂ ಅಧಿಕ ಬಸವಪರ ಸಂಘಟನೆಗಳಿಂದ ಅದ್ದೂರಿ ಬೈಕ್ ರ‌್ಯಾಲಿ ಜರುಗಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು. ಸಾವಿರಾರು ಬೈಕ್ ಸವಾರರು ಬಸವಣ್ಣನವರ ಷಟಸ್ಥಲ ಧ್ವಜದೊಂದಿಗೆ ನಗರದ ಪ್ರಮುಖ ಬೀದಿಗಳಾದ ಆರ್‌ಪಿಡಿ ಸರ್ಕಲ್, ಬಿಗ್ ಬಜಾರ್, ಅನಗೋಳ ಮುಖ್ಯ ರಸ್ತೆ, ವಡಗಾಂವ ಮುಖ್ಯ ರಸ್ತೆ, ನಾಥ್ ಪೈ ಸರ್ಕಲ್ ಶಹಾಪುರ, ಖಾಡೆ ಬಜಾರ, ಶಿವಾಜಿ ಗಾರ್ಡನ್ ಕಪಿಲೇಶ್ವರ ಮಾರ್ಗ, ರಾಮದೇವ ಗಲ್ಲಿ, ಸಾಮಾದೇವಿ ಗಲ್ಲಿ, ಕಾಲೇಜ್ ರಸ್ತೆ, ಚನ್ನಮ್ಮ ವತ್ತ, ಆರ್.ಎನ್.ಶೆಟ್ಟಿ, ನಾಗನೂರು ಮಠ, ಲಿಂಗಾಯತ ಭವನ, ಶ್ರೀನಗರ ಉದ್ಯಾನ, ಮಹಾಂತೇಶ ನಗರ, ಹರ್ಷಾ ಹೋಟೆಲ್ ಮೂಲಕ ರಾಮತೀರ್ಥ ನಗರದಲ್ಲಿ ಕೊನೆಗೊಂಡಿತು.

ಹಲವು ಸಂಘಟನೆಗಳು ಭಾಗಿ: ರ‌್ಯಾಲಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ, ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವದಳ, ಲಿಂಗಾಯತ ಮಹಿಳಾ ಸಮಾಜ, ಲಿಂಗಾಯತ ಸೇವಾ ಸಮಿತಿ, ಬಸವ ಕಾಯಕಜೀವಿಗಳ ಸಂಘ, ಬಸವೇಶ್ವರ ಯುವಕ ಸಂಘ, ಮಹಾಂತೇಶ ನಗರದ ಲಿಂಗಾಯತ ಧರ್ಮ ಮಹಾಸಭಾ, ಸಹ್ಯಾದ್ರಿನಗರದ ಲಿಂಗಾಯತ ಕ್ಷೇಮಾಭಿವದ್ಧಿ ಸಂಘ, ಲಿಂಗಾಯತ ಬಿಜ್ನಿಸ್ ಪೋರಂ, ಶಹಾಪೂರದ ಶ್ರೀ ದಾನಮ್ಮದೇವಿ ಮಂದಿರ ಮತ್ತು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಈ ಮೊದಲಾದ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು.

ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಲೋಕಸಭಾ ಸದಸ್ಯ ಜಗದೀಶ ಶೆಟ್ಟರ, ಶಾಸಕ ಅಭಯ ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜಾಗತಿಕ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ, ಲಿಂಗಾಯತ ಸಂಘಟನೆ ಈರಣ್ಣ ದೇಯನ್ನವರ, ರಾಷ್ಟ್ರೀಯ ಬಸವ ದಳದ ಅಶೋಕ ಬೆಂಡಿಗೇರಿ, ಚಂದ್ರಶೇಖರ ಬೆಂಬಳಗಿ, ಶಂಕರ ಗುಡಸ, ಎಂ.ಬಿ.ಝೀರಲಿ ಇತರರಿದ್ದರು.

ಮೇಲ್ಸೇತುವೆಗೆ ಬಸವಣ್ಣ ಹೆಸರು

ಬಸವೇಶ್ವರ ವೃತ್ತದಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ರೈಲ್ವೆ ಮೇಲ್ಸೇತುವೆ ರಸ್ತೆಗೆೆ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಹೆಸರು ನಾಮಕರಣ ಮಾಡಲಾಯಿತು. ಇದೇ ವೇಳೆ ನಾಮಲಕವನ್ನು ಸಂಸದ ಜಗದೀಶ ಶೆಟ್ಟರ್ ಡಾ.ಪ್ರಭಾಕರ ಕೋರೆ ಮತ್ತು ಗಣ್ಯರ ಜತೆಗೂಡಿ ಅನಾವರಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net