ಮೊಬೈಲ್‌ನಲ್ಲಿ ಹರಿದಾಡುವುದೆಲ್ಲ ಸತ್ಯವಲ್ಲ

18 smg 4
ಎಟಿಎನ್‌ಸಿ ಕಾಲೇಜಿನಲ್ಲಿ ಆಯೋಜಿಸಿದ್ದ ಆಚಾರ್ಯ ಅದ್ವಿತೀಯ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವವನ್ನು ಕುವೆಂಪು ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ ಉದ್ಘಾಟಿಸಿದರು. ಎ.ಎಲ್.ಮಂಜುನಾಥ, ಜಿ.ಎಸ್.ನಾರಾಯಣ ರಾವ್, ಪ್ರೊ. ಮಮತಾ, ಡಾ. ಪಿ.ನಾರಾಯಣ್, ಮಧುರಾವ್, ಎನ್.ಟಿ.ನಾರಾಯಣರಾವ್ ಇದ್ದರು.
Published on

ಶಿವಮೊಗ್ಗ: ಮೊಬೈಲ್ ಎಂಬ ಅಂಧತ್ವದಿಂದ ಹೊರಬಂದು ಸಮಾಜದ ವಾಸ್ತವತೆಯ ಜ್ಞಾನ ಪಡೆದುಕೊಳ್ಳುವಂತೆ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ. ಶರತ್ ಅನಂತಮೂರ್ತಿ ಯುವಕರಿಗೆ ಸಲಹೆ ನೀಡಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಆಚಾರ್ಯ ಅದ್ವಿತೀಯ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮೂಹ ಮೊಬೈಲ್ ಎಂಬ ಯುನಿವರ್ಸಿಟಿಗೆ ಸೀಮಿತವಾಗಿದೆ. ಅಲ್ಲಿ ಬರುವ ವಿಷಯಗಳೆ ಸತ್ಯ ಎಂದು ನಂಬುತ್ತಾರೆ. ಅಂತಹ ಮನಸ್ಥಿತಿಗಳಿಂದ ಹೊರಬಂದು ನಮ್ಮ ಸಮಾಜದ ವಾಸ್ತವತೆಯ ಜ್ಞಾನ ಪಡೆಯಬೇಕು. ಶೈಕ್ಷಣಿಕ ಕಲಿಕೆಯ ಜತೆಗೆ ಕೌಶಲ ಸಹಿತ ಜ್ಞಾನಾರ್ಜನೆ ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕಲೆ, ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ಸದಾ ನಮ್ಮನ್ನು ಬಲಗೊಳಿಸುತ್ತವೆ. ಬದುಕಿನ ಅದ್ವಿತೀಯಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸದಾಭಿರುಚಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ನಾವೀನ್ಯಯುತ ಯೋಜನೆಗಳನ್ನು ರೂಪಿಸುವಾಗ ಇಂತಹ ಯೋಚನೆ ಸಮಾಜಕ್ಕೆ ಮಾರಕವೋ?, ಪೂರಕವೋ ಎಂಬ ಜವಾಬ್ದಾರಿಯುತ ನಡೆ ತಮ್ಮದಾಗಬೇಕೆಂದು ಕಿವಿಮಾತು ಹೇಳಿದರು.
ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿದರು. ಪ್ರಾಚಾರ್ಯೆ ಪ್ರೊ. ಮಮತಾ ಅಧ್ಯಕ್ಷತೆ ವಹಿಸಿದ್ದರು. ಈ ಸಾಲಿನ ಬಿಕಾಂ ಮತ್ತು ಬಿಬಿಎ ವಿಭಾಗಗಳಲ್ಲಿ ರ‌್ಯಾಂಕ್ ಪಡೆದ ಕಾಲೇಜಿನ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಪದವಿ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕರಾದ ಮಧುರಾವ್, ಎನ್.ಟಿ.ನಾರಾಯಣರಾವ್, ಎಚ್.ಸಿ.ಶಿವಕುಮಾರ್, ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಧ್ಯಾಪಕರಾದ ಪ್ರೊ. ಎಸ್.ಜಗದೀಶ್, ಪ್ರೊ. ಕೆ.ಎಂ.ನಾಗರಾಜ, ಪ್ರೊ. ಎನ್.ಮಂಜುನಾಥ, ಸಹ ಪ್ರಾಧ್ಯಾಪಕಿ ಟಿ.ಗಾಯತ್ರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net