ನಿಸ್ವಾರ್ಥ ಸೇವೆಯಿಂದ ಎಲ್ಲವೂ ಸಾಧ್ಯ

HKR
Published on

ಹಿರೇಕೆರೂರ: ಎಲ್ಲರೂ ಧರ್ಮದ ತಳಹದಿ ಮೇಲೆ ನಿಸ್ವಾರ್ಥ ಸೇವೆ ಮಾಡಿದರೆ ಮಾತ್ರ ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಹುದು. ಇದಕ್ಕೆ ಇಲ್ಲಿ ನಿರ್ವಣಗೊಂಡ ಆಂಜನೇಯ, ವಿಘ್ನೕಶ್ವರ ದೇವಸ್ಥಾನವೇ ಉತ್ತಮ ಉದಾಹರಣೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಪೊಲೀಸ್ ಮೈದಾನದಲ್ಲಿ ನೂತನವಾಗಿ ನಿರ್ವಣಗೊಂಡ ವಿಘ್ನೕಶ್ವರ, ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಿಕ್ಕಂತಹ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಪೊಲೀಸ್ ಇಲಾಖೆಯು ಇಂತಹ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳು, ಭಕ್ತರ ಸಹಾಯ, ಸಹಕಾರದಿಂದ ಕಲ್ಲಿನಿಂದ ಭವ್ಯ ದೇವಸ್ಥಾನ ನಿರ್ವಿುಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಧರ್ಮ ಎಂದರೆ ಸಕಲ ಜೀವಿಗಳಿಗೆ ಲೇಸು ಬಯಸುವುದು. ಎಲ್ಲರೂ ಸೇವಾ ಮನೋಭಾವ ಹೊಂದಬೇಕು. ಅದನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಉತ್ತಮ ಸೇವೆ, ದಾನ ಮಾಡಿದರವರನ್ನು ಎಂದಿಗೂ ಮರೆಯಬಾರದು. ಐಷಾರಾಮಿ ಜೀವನ ಆರೋಗ್ಯಕ್ಕೆ ಹಾನಿಕರವಾಗಿದೆ. ದುಡಿಮೆಯ ಒಂದಿಷ್ಟು ಹಣವನ್ನು ದಾನ ಧರ್ಮಗಳಿಗೆ ಮೀಸಲಿರಿಸಬೇಕು ಎಂದರು.

ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಹಾಗೂ ಸಿಪಿಐ ಬಸವರಾಜ ಪಿ.ಎಸ್., ಮಾತನಾಡಿದರು.

ದೇವಸ್ಥಾನ ನಿರ್ವಣಕ್ಕೆ ದಾನ ಮಾಡಿದವರು, ಸೇವೆ ಸಲ್ಲಿಸಿದವರು ಮತ್ತು ಗಣ್ಯರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ವಿಘ್ನೕಶ್ವರ, ಆಂಜನೇಯಸ್ವಾಮಿ ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ವಿಜಯಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸಂಜೆ ದಕ್ಷಿಣೋತ್ತರ ಯಕ್ಷಗಾನ ಕಲಾವಿದರಿಂದ ‘ಮಾರುತಿ ಮಹಿಮೆ’ ಯಕ್ಷಗಾನ ನಡೆಯಿತು.

ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಜಿ. ಶಿವನಗೌಡ್ರ, ಜಗದೀಶ ತಂಬಾಕದ, ರಾಮನಗರ ಎಸ್ಪಿ ಟಿ.ವಿ. ಸುರೇಶ, ಡಿವೈಎಸ್ಪಿ ಎಲ್.ವೈ. ಶಿರೋಳ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್​ಐ ನೀಲಪ್ಪ ನರಲಾರ, ಎಸ್.ಬಿ. ತಿಪ್ಪಣ್ಣನವರ, ಚಂದ್ರು ಮಾಜಿಗೌಡರ, ಸಿಪಿಐ ಲೋಕೇಶ, ಜಿ.ಪಿ. ಪ್ರಕಾಶಗೌಡ, ಬಾಲು ಜನ್ನು, ಜಿ.ಎಚ್. ತಳವಾರ, ಜೀಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಲೋಕಪ್ಪ ಸಂಕೊಳ್ಳಿ, ಸತೀಶ ನಾಡಿಗೇರ, ಮಹೇಂದ್ರ ಬಡಳ್ಳಿ, ಗುರುಶಾಂತಪ್ಪ ಎತ್ತಿನಹಳ್ಳಿ, ರುದ್ರಮುನಿ ಹುಲ್ಮನಿ, ಬಸವರಾಜ ಕಾಲ್ವೀಹಳ್ಳಿ, ದುರ್ಗಪ್ಪ ನೀರಲಗಿ, ಗುರುಮೂರ್ತಿ ನಾಡಿಗೇರ, ಇತರರಿದ್ದರು. ಮೇಘರಾಜ ಮಾಳಗಿಮನಿ, ಮಹೇಂದ್ರ ಬಡಳ್ಳಿ, ರಾಘವೇಂದ್ರ ಹಂಚಿನಮನಿ ಹಾಗೂ ಎನ್. ಸುರೇಶಕುಮಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net