ಸೇವಾಕಾರ್ಯದಲ್ಲಿ ಪ್ರತಿಯೊಬ್ಬರ ಪಾತ್ರವು ಮುಖ್ಯ

Everyone's role in service is important.
ಹುನಗುಂದ ಪಟ್ಟಣದ ಬಸವಮಂಟಪದಲ್ಲಿ ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿಯಿಂದ ಪಾದಯಾತ್ರಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಯಿತು.
Published on

ಹುನಗುಂದ: ಪಟ್ಟಣದ ಬಸವ ಮಂಟಪದಲ್ಲಿ ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿ ಮಾ.14 ರಿಂದ 18ರವರೆಗೆ ಪಟ್ಟಣದ ಮಾರ್ಗವಾಗಿ ಹಾದು ಹೋಗುವ ಶ್ರೀಶೈಲ ಪಾದಯಾತ್ರೆಗಳಿಗೆ ಮೂಲ ಸೌಕರ್ಯ ಹಾಗೂ ಪ್ರಸಾದ ಸೇವೆ ಒದಗಿಸುತ್ತಿದ್ದಾರೆ.

ಲಿಂ. ಶಿವನಾಗಪ್ಪ ದರಗಾದ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ಸಮಿತಿಯು ನಿಸ್ವಾರ್ಥತೆಯಿಂದ ಪಾದಯಾತ್ರಿಗಳಿಗೆ ಸೇವೆ ಸಲ್ಲಿಸುತ್ತಿದೆ.

ಸೇವಾ ಸಮಿತಿಯ ಅಧ್ಯಕ್ಷ ವೀರೇಶ ಕುರ್ತಕೋಟಿ ಮಾತನಾಡಿ, ಈ ಧಾರ್ಮಿಕ ಸೇವಾ ಕಾರ್ಯದಲ್ಲಿ ಪ್ರತಿಯೊಬ್ಬರ ಪಾತ್ರವು ಅಷ್ಟು ಮುಖ್ಯವಾಗಿರುತ್ತದೆ. ತಾಲೂಕಿಗೆ ಹೆಸರಾದ ನಮ್ಮೂರ ಬಾಣಸಿಗರು ತಯಾರಿಸಿದ ಉದರ ಸಜ್ಜಕ, ತರಕಾರಿ ಪಲ್ಲೆ, ನಗರದ ಭಕ್ತರು ನೀಡುವ ಬಿಳಿಜೋಳ, ನಾಡಾದ ಹುನಗುಂದದ ಬಿಳಿ ಜೋಳದ ರೊಟ್ಟಿ, ಚಪಾತಿ, ಮೊಸರನ್ನ, ಉಪ್ಪಿಟ್ಟು, ಅವಲಕ್ಕಿಮೊಸರು, ಚುರಮರಿ ಜೋಡಾ, ಅವಲಕ್ಕಿ ಮತ್ತು ಚುರಮರಿ ಸೂಸಲ, ಬಾಳೆ ಹಣ್ಣು, ದ್ರಾಕ್ಷಿ ಹಣ್ಣು, ತಂಪಾದ ನೀರು, ಕಲ್ಲಂಗಡಿ ಹಣ್ಣು ಮತ್ತಿತರ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ ಎಂದರು.

ಪ್ರಸಾದ ತಯಾರಿಗೆ ಅಗತ್ಯವಿರುವ ತರಕಾರಿಗಳನ್ನು ವ್ಯಾಪಾರಿಗಳಾದ ಮುನ್ನಾ ಭಾಗವಾನ, ಖಾಜೇಸಾಬ ಭಾಗವಾನ ಮತ್ತಿತರರು ಉಚಿತವಾಗಿ ನೀಡಿದ್ದಾರೆ ಎಂದರು.

ಸಮಿತಿಯ ಸದಸ್ಯರಾದ ಶರಣಯ್ಯ ತಾವರಗೇರಿಮಠ, ಕಿಡಿಯಪ್ಪ ಹೂಲಗೇರಿ, ಜಗದೀಶ ಬಳ್ಳೊಳ್ಳಿ, ಈರಪ್ಪ ನಾಗೂರ, ಮಹಾಂತೇಶ ಹೊದ್ಲೂರ, ಪರಸಪ್ಪ ಪಲ್ಲೇದ, ಮಲ್ಲಪ್ಪ ಪಲ್ಲೇದ, ಶಿವಪ್ಪ ಬಾದವಾಡಗಿ, ನಾಗನಗೌಡ ನಾಡಗೌಡ, ಸಂಗಮೇಶ ವೀರಾಪೂರ, ಶೇಖರಯ್ಯ ಪುರದಯ್ಯನಮಠ, ಶಿವನಗೌಡ ಹಿರೇವೆಂಕನಗೌಡ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net