ಭಾರತ ವಿಶ್ವಗುರುವಾಗಲಿ ಎಲ್ಲರ ಶ್ರಮ ಮುಖ್ಯ

3 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾರ್ಥಕ್ಕಾಗಿ ಕಾರ್ಯ ಮಾಡದೆ ಸಮಾಜಕ್ಕಾಗಿ ಕಾರ್ಯ ಮಾಡಿದರೆ ಸಾಧನೆಯಾಗುತ್ತದೆ. ಇಂದು ನಾವು ಆಧ್ಯಾತ್ಮಿಕವಾಗಿ ನಮ್ಮ ಜೀವನ ಹಾಗೂ ಬದುಕನ್ನು ವಿಶಾಲ ತಳಹದಿ ಮೇಲೆ ರೂಪಿಸಿಕೊಳ್ಳಬೇಕಿದೆ. ನಮ್ಮ ದೇಶ ವಿಶ್ವ ಗುರುವಾಗಲು ಎಲ್ಲರ ಪಾತ್ರ, ಶ್ರಮ ಬಹಳ ಮುಖ್ಯ ಎಂದು ಮಾಜಿ ಶಾಸಕ ಎ.ಬಿ. ದೇಸಾಯಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಚೆನ್ನವೀರಗೌಡ ಅಣ್ಣಾ ಶಿದ್ರಾಮಗೌಡ ಪಾಟೀಲ ಸಂಸ್ಮರಣೆ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ನಾವು ಬೌದ್ಧಿಕ, ಶಾರೀರಿಕ, ಮಾನಸಿಕವಾಗಿ ಪ್ರಬುದ್ಧರಾದಾಗ ಆಯುಷ್ಯ, ವಿದ್ಯೆ ಯಶಸ್ಸು, ಬಲ ಪಡೆಯಲು ಸಾಧ್ಯ. ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರ ಮುಖ್ಯವಾಗಿದೆ. ಆ ದಿಸೆಯಲ್ಲಿ ಎಲ್ಲರೂ ತೊಡಗಬೇಕು ಎಂದರು.
ಡಾ. ಶಿವಪ್ರಸಾದ ಎಸ್.ಎಂ. ಮಾತನಾಡಿ, ಆಗಿನ ಕಾಲಕ್ಕೆ ಬೇಕಾಗಿದ್ದನ್ನು ಕೆಎಲ್‌ಇ ಸಂಸ್ಥೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇಂದು ನಾವು ಬದುಕುವ ರೀತಿ ಮತ್ತು ತಾಂತ್ರಿಕವಾಗಿ ಶಿಕ್ಷಣ, ತಂತ್ರಜ್ಞಾನದಲ್ಲಿ ಬದಲಾವಣೆ ಕಂಡಿದ್ದೇವೆ. ಮುಂಬರುವ 10-15 ವರ್ಷಗಳಲ್ಲಿ ಈ ಕ್ಷೇತ್ರಗಳಲ್ಲಿ ಅಮೋಘ ಬದಲಾವಣೆ ಕಾಣಲಿದ್ದೇವೆ ಎಂದರು.
ಕೆಎಲ್‌ಇ ಸಂಸ್ಥೆ ನಿರ್ದೇಶಕ ಡಾ. ವಿ.ಎಸ್. ಸಾಧೂನವರ ಅವರಿಗೆ ಸನ್ಮಾನಿಸಲಾಯಿತು. ರಾಜು ಪಾಟೀಲ, ಡಾ. ಸಂಜೀವ ಕುಲಕರ್ಣಿ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಚಂದ್ರಗೌಡ ಪಾಟೀಲ, ಡಾ. ಎಸ್.ಆರ್. ರಾಮನಗೌಡರ, ಡಾ. ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಕೌಜಲಗಿ, ಶಶಿಭೂಷಣ ದೊಡವಾಡ, ಬಿ.ಎಲ್. ಶಿವಳ್ಳಿ, ಪಿ.ವಿ. ಪಾಟೀಲ, ಜಿ. ಆರ್.ದುರ್ಗಾಡಿ, ಎಸ್.ಎಂ. ಪಾಟೀಲ, ಎನ್.ಆರ್. ಬಾಳಿಕಾಯಿ, ಆರ್.ಎಸ್. ಪಾಟೀಲ, ಚನ್ನಮ್ಮ ಪಾಟೀಲ, ಜ್ಯೋತಿ ಭಾವಿಕಟ್ಟಿ, ಚನ್ನಮ್ಮ ಚಂದ್ರಗೌಡ, ಪಾಟೀಲ ಕುಟುಂಬಸ್ಥರು, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಸಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net