ಫಲಿತಾಂಶ ಸುಧಾರಣೆಗೆ ಎಲ್ಲರ ಸಹಕಾರ ಮುಖ್ಯ

23 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಗ್ರ ಶೈಕ್ಷಣಿಕ ಬದಲಾವಣೆ ಮತ್ತು ಪ್ರತಿ ಶಾಲೆ ಪ್ರಸಕ್ತ ವರ್ಷ ಸಂಪೂರ್ಣ ಫಲಿತಾಂಶ ಪಡೆಯಲು ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕರ ಪಾತ್ರ ಮುಖ್ಯ. ಇದನ್ನು ಸಂಯೋಜಿಸಿ, ಗುರಿ ಸಾಧಿಸಲು ಶಾಲೆ ಮುಖ್ಯಾಧ್ಯಾಪಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಪ್ರೌಢ ಶಾಲಾ ಶಿಕ್ಷಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕರು ಶಾಲೆಗೆ ಪ್ರತಿ ದಿನ ಸಮಯಕ್ಕೆ ಸರಿಯಾಗಿ ಬರಬೇಕು. ಕ್ಲಾಸ್​ಗಳಿಗೆ ಭೇಟಿ ಮಾಡಿ, ಪಾಠ, ಕಲಿಕೆ ಬಗ್ಗೆ ಅವಲೋಕಿಸಬೇಕು. ನಿಯಮಿತವಾಗಿ ಎಸ್​ಡಿಎಂಸಿ ಸಭೆ, ಪಾಲಕರ ಸಭೆ ಮತ್ತು ತಾಯಂದಿರ ಸಭೆ ಜರುಗಿಸಿ, ಅಲ್ಲಿ ಚರ್ಚಿತ ವಿಷಯಗಳನ್ನು ದಾಖಲಿಸಬೇಕು. ಇದನ್ನು ಪ್ರತ್ಯೇಕ ತಂಡದಿಂದ ಜಿಲ್ಲಾಡಳಿತ ನಿಗಾವಹಿಸಲಿದೆ ಎಂದರು.
ವಿವಿಧ ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿದರು. ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಎಸ್​.ಬಿ.ಮಲ್ನಾಡ, ಉಮಾದೇವಿ ಬಸಾಪುರ, ಮಹಾದೇವಿ ಮಾಡಲಗೇರಿ, ಜಿ.ಆರ್​.ಭಟ್​, ಬಿ.ಜಿ.ಬಶೆಟ್ಟಿ, ವಿರೂಪಾ ಹುದ್ದಾರ, ಇತರರು ಇದ್ದರು.
ಎಸ್​.ಎಸ್​.ಕೆಳದಿಮಠ ಸ್ವಾಗತಿಸಿದರು. ಗಿರಿಜಾ ಅಮಲಜೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net