ಧಾರ್ವಿುಕ ಕೇಂದ್ರಗಳ ಸ್ಥಾಪನೆಗೆ ಎಲ್ಲರ ಸಹಕಾರ ಮುಖ್ಯ

07 upbr 3-Pravachana prarambha
Published on

ಉಪ್ಪಿನಬೆಟಗೇರಿ: ದೇವಸ್ಥಾನ, ಮಠಗಳಂತಹ ಧಾರ್ವಿುಕ ಕೇಂದ್ರಗಳ ಸ್ಥಾಪನೆಗೆ ಗ್ರಾಮಸ್ಥರು ನೀಡುವ ಎಲ್ಲ ರೀತಿಯ ಸಹಕಾರ ಮುಖ್ಯವಾಗಿದೆ ಎಂದು ಬೆಳಗಾವಿ ಆರ್​ಟಿಒ ಶಿವಾನಂದ ಕೇಸರಿ ಹೇಳಿದರು.

ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ನೂತನವಾಗಿ ಶಿಲೆಯಿಂದ ನಿರ್ವಿುಸಿದ ಶ್ರೀ ಆಂಜನೇಯ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಲ್ಲಿದ್ದ ಆಂಜನೇಯ ದೇವಸ್ಥಾನ ತುಂಬಾ ಹಳೆಯದ್ದಾಗಿತ್ತು. ಅದನ್ನು ಶಿಲೆಯಲ್ಲಿ ನೂತನವಾಗಿ ನಿರ್ವಿುಸಬೇಕೆಂಬ ಸಂಕಲ್ಪ ತೊಟ್ಟಿದ್ದರು. ಎಲ್ಲರ ಸಹಕಾರದಿಂದ ಈಗ ನೂತನ ಶಿಲಾ ಮಂದಿರ ನಿರ್ವಣವಾಗಿ ಶ್ರೀ ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿಗಳು ಆಶೀರ್ವಚನ ನೀಡಿ, ಹನುಮನಕೊಪ್ಪ ಭಕ್ತರು ಕಲ್ಲಿನಿಂದ ಆಂಜನೇಯ ಗುಡಿ ಕಟ್ಟಬೇಕೆಂಬ ಹಲವಾರು ವರ್ಷಗಳ ಬಯಕೆ ಈಗ ಈಡೇರಿದೆ. ಪ್ರತಿಯೊಂದು ಸಾಮಾಜಿಕ ಹಾಗೂ ಧಾರ್ವಿುಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಈ ಗ್ರಾಮಸ್ಥರ ಕಾರ್ಯ ಮೆಚ್ಚುವಂಥದ್ದು ಎಂದರು.

ಇಂಡಿ ತಾಲೂಕಿನ ಖೇಡಗಿಯ ಶ್ರೀ ಪ್ರಭುದೇವರಿಂದ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕ ಕಾಶಪ್ಪ ದೊಡವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವಸ್ಥಾನಕ್ಕೆ ದೇಣಿಗೆಯಾಗಿ ಕಾಣಿಕೆ ನೀಡಿದ ಭಕ್ತರನ್ನು ಶ್ರೀಗಳು ಗೌರವಿಸಿದರು. ಮೃತ್ಯುಂಜಯಸ್ವಾಮಿ ಯರಗಂಬಳಿಮಠ, ಮಾಜಿ ಶಾಸಕಿ ಸೀಮಾ ಮಸೂತಿ, ಕಲ್ಲಪ್ಪ ತಿಗಡಿ, ಅಜಿತ ಛಬ್ಬಿ, ಪ್ರಕಾಶ ಹೂಗಾರ, ಕಲ್ಲಪ್ಪ ಬೊಬ್ಬಿ, ವಿಜಯಲಕ್ಷ್ಮೀ ಕೇಸರಿ ಸೇರಿ ಹನುಮನಕೊಪ್ಪ ಉಪ್ಪಿನಬೆಟಗೇರಿ ಭಕ್ತರು ಉಪಸ್ಥಿತರಿದ್ದರು. ಶಿಕ್ಷಕ ಸಂಜಯ ಕೊಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net