ಯೋಗ, ಯೋಗ್ಯತೆ ಇದ್ದವರು ಯಾರು ಬೇಕಾದ್ರೂ ಸಿಎಂ ಆಗಬಹುದು: ಸಚಿವ ಬಿ.ಸಿ.ಪಾಟೀಲ್​

BCPatil
Published on

ದಾವಣಗೆರೆ: ಯಾರ ಹಣೆ ಬರಹದಲ್ಲಿ ಏನಿದಿಯೋ ಗೊತ್ತಿಲ್ಲ, ಯೋಗಾ, ಯೋಗ್ಯತೆ ಇದ್ದವರು ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದು ಸಚಿವ ಬಿ.ಸಿ.ಪಾಟೀಲ್​ ಹೇಳಿದ್ದಾರೆ.

ವಿಜಯೇಂದ್ರ ಮುಖ್ಯ ಮಂತ್ರಿ ಆಗ್ತಾರೆ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಅದೃಷ್ಟ ಇದ್ದವರು ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು,ನಾಳೆ ರವಿ ಅಣ್ಣ ಅವರು ಕೂಡ ಆಗಬಹುದು ಎಂದು ಪಕ್ಕದಲ್ಲಿದ್ದ ಶಾಸಕ ಎಸ್ ರವೀಂದ್ರನಾಥ್ ಅವರ ಹೆಸರನ್ನು ಪ್ರಸ್ತಾಪಿಸಿದರು.

ಜನರ ಆಶೀರ್ವಾದದ ಜತೆಮ ಹೈಕಮಾಂಡ್​ ಆಶೀರ್ವಾದವೂ ಇರಬೇಕು, ಇವೆರಡೂ ಇದ್ದವರು ಸಿಎಂ ಆಗೇ ಆಗುತ್ತಾರೆ ಎಂದು ಹೇಳಿದರು. ಇನ್ನು ಸಂಪುಟ ವಿಸ್ತರಣೆ ಸುಳಿವು ನೀಡಿದ ಅವರು, ಚುನಾವಣೆ ಮುಗಿದಿದೆ, ಇನ್ಮೇಲೆ ಮಾಡಬಹುದು, ಯಾವುದಕ್ಕೂ ಸಿಎಂ ಅವರಿಗೆ ಕೇಳುವುದು ಒಳ್ಳೆಯದು ಎಂದು ಹೇಳಿದರು.

ಪಠ್ಯ ಪರಿಷ್ಕರಣೆ ವಿವಾದದ ಬಗ್ಗೆ ಮಾತನಾಡಿ, ಇದಕ್ಕೆ ಸಿಎಂ ಇತಿಶ್ರೀ ಹಾಡಿದ್ದಾರೆ. ಆದರೂ ಕಾಂಗ್ರೆಸ್​​ನವರು ಜೀವಂತವಾಗಿ ಇಡೋಕೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net