

ರಾಯಬಾಗ: ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಉಂಟಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಕಚೇರಿ ಚಿಕ್ಕೋಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೋಭಾ ಪೋಳ ತಿಳಿಸಿದರು.
ತಾಲೂಕಿನ ನಂದಿಕುರಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಕಲ್ಲು ಗಣಿಗಾರಿಕೆಗೆ ಬುಧವಾರ ಭೇಟಿ ನೀಡಿ ಸುತ್ತ ಮುತ್ತಲಿನ ಪರಿಸರ ವೀಕ್ಷಣೆ ಮಾಡಿ, ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದ ಅವರು, ಇದು ಜನದಟ್ಟಣೆ ಪ್ರದೇಶ ವ್ಯಾಪ್ತಿಯಿಂದ ದೂರವಿದ್ದು, ಗಣಿಗಾರಿಕೆ ನಡೆಸುವವರು ಎಲ್ಲ ಸುರಕ್ಷಿತ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಸೀಲ್ದಾರ್ ಸುರೇಶ ಮುಂಜೆ, ಭೂ ವಿಜ್ಞಾನಿ ಯಾಜ್ ಅಹ್ಮದ್ ಶೇಖ, ಪೃಥ್ವಿರಾಜ ಜಾಧವ, ಅಮಿತ ಜಾಧವ, ಸೋಮಶೇಖರ ಜೋರೆ, ರಾಜೇಂದ್ರ ಡಬ್ಬಣ್ಣನವರ, ಗಿರೀಶ ಬಿರಾದಾರ, ಸೋಮು ಸಂಕಪಾಳ, ರಾಜು ದಾವಣೆ ಇತರರಿದ್ದರು.