

ವಿಜಯಪುರ: ಸಕಲ ಜೀವರಾಶಿಗಳಿಗೆ ಭೂಮಿ ಆಶ್ರಯ ತಾಣವಾಗಿದೆ. ಅದನ್ನು ಸಂರಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಮಹತ್ತರ ಜಾವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸಹಾಯಕ ನಿರ್ದೇಶಕರ ಕಚೇರಿ ವಿಭಾಗೀಯ ಗುಣ ನಿಯಂತ್ರಣ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಭೂದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾಲಿನ್ಯದಿಂದ ಪರಿಸರ ನಾಶವಾಗಿ ಭೂಮಿ ವಿನಾಶದ ಅಂಚಿನತ್ತ ಸಾಗುತ್ತಿದೆ. ಅದನ್ನು ನಾವು ಕಾಪಾಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪರಿಸರ ಅಧಿಕಾರಿ ವಿವೇಕ ಗುನಗ ಮಾತನಾಡಿ, ಮಾನವ ಅಗತ್ಯತೆಯ ಮಿತಿ ಕಂಡುಕೊಂಡಾಗ ಪ್ರಕೃತಿ ಸಂರಕ್ಷಿಸಲು ಸಾಧ್ಯ ಎಂದರು.
ವಕೀಲರ ಸಂದ ಅಧ್ಯಕ್ಷ ಡಿ.ಜಿ. ಬಿರಾದಾರ ಮಾತನಾಡಿದರು. ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆಯ ರೂರ್ಕೆಲಾ ಬೆಳಗಾವಿ ವಿಭಾಗದ ನಿವೃತ್ತ ಜ್ಞಾನಿ ಡಾ. ಪುರಂದರ ಬೇಕಲ್ಲ ಉಪನ್ಯಾಸ ನೀಡಿದರು.
ಹಿರಿಯ ಭೂ ವಿಜ್ಞಾನಿ ಮಹೇಶ ಬಿರಾಜನವರ ಹಾಗೂ ಟಿ. ಚಂದ್ರಶೇಖರ ಮತ್ತಿತರರಿದ್ದರು.