

ಮಾಂಜರಿ: ಪರಿಸರ ಉಳಿಸುವ ಧರ್ಮ ನಮ್ಮದಾಗಬೇಕಿದ್ದು, ಸ್ವಚ್ಛ ಹಾಗೂ ಸುಂದರ ಪರಿಸರ ಇದ್ದರೆ ಮನುಷ್ಯನ ಆರೋಗ್ಯ ಚೆನ್ನಾಗಿತ್ತದೆ ಎಂದು ಸಿಬಿಎಸ್‌ಎಸ್‌ಕೆ ಕಾರ್ಖಾನೆ ಮಾಜಿ ಅಧ್ಯಕ್ಷ ಭರತೇಶ ಬನವಣೆ ಹೇಳಿದರು.
ಸಮೀಪದ ನಸಲಾಪುರ ಗ್ರಾಮದ ತಮ್ಮ ಸ್ವಗಹದಲ್ಲಿ ತಂದೆಯ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಕಾವ್ಯ ಜಿನಾಷ್ಟಕಗಳು ಎಂಬ ಜೆನ ಧರ್ಮದ ಶಾಸ ಗ್ರಂಥವನ್ನು ವಸಂತ ಶ್ರೀಮಂತ ಸಮಾಜೆ ದಂಪತಿಯಿಂದ ಬಿಡುಗಡೆ ಮಾಡಿಸಿ ಹಾಗೂ ಸಸಿ ನೆಟ್ಟು ಮಾತನಾಡಿದರು.
ಕಾಂಕ್ರಿಟ್ ಯುಗದಲ್ಲಿ ಪರಿಸರ ನಾಶವಾಗುತ್ತಿದೆ. ಅದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಸಸಿ ವಿತರಿಸಲಾಯಿತು. ಸುರೇಂದ್ರ ಸಮಾಜೆ, ವರ್ಧಮಾನ ಬನವಣೆ, ಚಂದ್ರಕಾಂತ ಪಾಟೀಲ, ಚೇತನ ಅಸ್ಕಿ , ದೇವೇಂದ್ರ ಬನವಣೆ, ಭೂಪಾಲ ಉಪಾಧ್ಯೆ, ಕಲ್ಲಪ್ಪ ಸಮಾಜೆ, ಮಾರುತಿ ಘಾಟಿಗೆ, ಮಹಾವೀರ ಪಾಟೀಲ, ವೆಂಕಟೇಶ ಬನವಣೆ, ವಿಕಾಸ ಸಮಾಜೆ, ಅಜಿತ ಬನವಣೆ ಇತರರಿದ್ದರು.