ಜಾನಪದ ಕಲೆ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಿ

6 INDI-1 JANAPADA
ಇಂಡಿ ತಾಲೂಕಿನ ಗೊರನಾಳ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಮುರುೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.
Published on

ಇಂಡಿ: ಇಂದಿನ ಆಧುನಿಕ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಿರಶ್ಯಾಡದ ಅಭಿನವ ಮುರುೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಗೊರನಾಳ ಗ್ರಾಮದ ಬೆಂಗಳೂರಿನ ಪಿ.ಎಂ. ಶ್ರೀ ಸರ್ಕಾರಿ ಪ್ರೌಢಶಾಲೆ ಮತ್ತು ಕನ್ನಡ ಜಾನಪದ ಪರಿಷತ್, ಜಿಲ್ಲಾ ಜಾನಪದ ಪರಿಷತ್ ಮತ್ತು ತಾಲೂಕು ಜಾನಪದ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ. ಎಸ್. ಬಾಲಾಜಿ ಮಾತನಾಡಿ, ಜಾನಪದ ಅಳಿವಿನ ಅಂಚಿನಲ್ಲಿರುವ ಕಲೆಯಲ್ಲ. ಬದಲಾಗಿ ಅದು ತಲೆ ಮಾರಿನಿಂದ ತಲೆಮಾರಿಗೆ ಬದಲಾಗುತ್ತಿದ್ದು, ಅದರ ಉಳಿವು ಅಗತ್ಯವಾಗಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಪಂಡಿತ ಅವಜಿ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಶ್ಲಾಘನೀಯ ಎಂದರು.

ಮಾಯವ್ವ ಹಂಜಗಿ, ಜಟ್ಟೆಪ್ಪ ಮಾದರ, ತುಕಾರಾಮ ಸೂರ್ಯವಂಶಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಯಾಗಿ ಜಟ್ಟೆಪ್ಪ ಮಾದರ, ಖಜಾಂಚಿಯಾಗಿ ಮಲ್ಲಿಕಾರ್ಜುನ ಸುಪನೂರ, ಜಂಟಿ ಕಾರ್ಯದರ್ಶಿಯಾಗಿ ಸುಭಾಸಚಂದ್ರ ನಾವಿ, ಪತ್ರಿಕಾ ಪ್ರತಿನಿಧಿ ಖಾಜು ಸಿಂಗೆಗೋಳ, ಸರದಾರ ಮುಲ್ಲಾ ಸಾಗರ ಮಾನೆ, ಗೀತಾ ಹತ್ತಳ್ಳಿ, ಪಾರ್ವತಿ ಸೊನ್ನದ, ತುಳಜಾರಾಮ ನಾಟಿಕಾರ, ಸುಭಾಸ ಕಾಮಾ, ಸುರೇಶ ಚವಾಣ್, ಸಿ.ಎಸ್. ಮೇತ್ರಿ ಸದಸ್ಯರಾಗಿ ಪದಗ್ರಹಣ ಮಾಡಿದರು.

ಬೆಂಗಳೂರಿನ ಮಹೇಂದ್ರ ಜಾಧವ, ವಿಜಯ ಇದ್ದರು.

ವಿಜಯಪುರ ಜಿಲ್ಲಾ ಮಹಿಳಾ ಜಾನಪದ ಪರಿಷತ್ ಅಧ್ಯಕ್ಷರಾಗಿ ದ್ರಾಕ್ಷಾಯಣಿ ಆಯ್ಕೆಯಾದರು. ಆನಂದ ಕೆಂಬಾವಿ, ಶ್ರೀನಿವಾಸ ಜಮಾದಾರ, ವೀರಣ್ಣ ನಾಯ್ಕೋಡಿ, ಎಂ.ಪಿ. ಚಿಮ್ಮಾಗೋಳ, ಎಂ.ಎಂ. ವಾಲಿಕಾರ, ವೈ.ಟಿ. ಪಾಟೀಲ, ಗೊಂದಳಿ ಕಲಾವಿದರು, ಚೌಡಕಿ ಪದ ಭಜನಾ ತಂಡದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net