ಪ್ರತಿಯೊಬ್ಬರೂ ಸಂವಿಧಾನ ಓದಬೇಕು

29NRGL1 UPANYASA
Published on

ನರೇಗಲ್ಲ: ಸಂವಿಧಾನ ಅಪೇಕ್ಷಿಸುವ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಹೋದರತ್ವ, ಸಹಬಾಳ್ವೆಯ ಮನಃಸ್ಥಿತಿ ತಳಮಟ್ಟದವರೆಗೂ ವ್ಯಾಪಿಸಬೇಕೆಂದರೆ, ಈ ಸಾಂವಿಧಾನಿಕ ಮೌಲ್ಯಗಳ ಹಿಂದಿರುವ ಚಾರಿತ್ರಿಕ ಪರಂಪರೆ ಮತ್ತು ಬಹುಸಾಂಸ್ಕೃತಿಕ ನೆಲೆಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ ಎಂದು ಉಪನ್ಯಾಸಕ ಶಿವಾನಂದ ಗೋಗೇರಿ ಹೇಳಿದರು.

ಸ್ಥಳೀಯ ಕೆಎಸ್​ಎಸ್ ಪಿಯುಸಿ ಕಾಲೇಜಿನಲ್ಲಿ ಗೃಹ ರಕ್ಷಕ ದಳದ ಆಶ್ರಯದಲ್ಲಿ ನಡೆದ ‘ಸಂವಿಧಾನ ಓದು ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಪವಿತ್ರವಾಗಿರುವ ದೇಶದ ಸಂವಿಧಾನವನ್ನು ಓದಿಕೊಂಡಿರಬೇಕು ಎಂದರು.

ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹರಕ್ಷಕರಾದ ಪಿ.ಎಸ್. ಸಾಬಳೆ, ಪಿ.ಕೆ. ಹಡಪದ, ಶರಣಪ್ಪ ಬೇಲೇರಿ, ವಿರೂಪಾಕ್ಷಪ್ಪ ಇಟಗಿ, ನಾಗಪ್ಪ ತಳವಾರ, ಶಿವಪ್ಪ ಮುಶಿಗೇರಿ, ಕೆಂಚಪ್ಪ ಹಾಳಕೇರಿ, ಮಂಜುನಾಥ ಕಡೆತೋಟದ, ಅರುಣ ಕುರುಡಗಿ ಸೇರಿದಂತೆ ಗೃಹ ರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net