ವನ್ಯ ಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

9ANKOLA2
Published on

ಅಂಕೋಲಾ: ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಕಾಡು ಉಳಿಸಿದರೆ, ನಾಡು ಉಳಿಯುತ್ತೆ ಎನ್ನುವ ಮಟ್ಟಕ್ಕೆ ಬಂದು ಜೀವಿಸುತ್ತಿದ್ದೇವೆ. ಇದಕ್ಕೆ ಉದಾಹರಣೆ ಎಂಬಂತೆ ಶಿರೂರು ಗುಡ್ಡ ಕುಸಿತ ದುರಂತ, ಕೇರಳದ ಗುಡ್ಡ ಕುಸಿತ ಹೀಗೆ ಒಂದಿಲ್ಲೊಂದು ದುರಂತಗಳು ಸಂಭವಿಸುತ್ತಲೇ ಇವೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ. ಹೇಳಿದರು.

ಇಲ್ಲಿನ ಪೂಜೆಗೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 70ನೇ ವನ್ಯಜೀವಿ ಸಂರಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಸಿಎಫ್ ಕೃಷ್ಣಾನಂದ ನಾಯಕ ಮಾತನಾಡಿ,ಯುವಕರು ಹಾಗೂ ವಿದ್ಯಾರ್ಥಿಗಳು ಗಿಡ ಬೆಳೆಸಿ, ನಾಡು ಉಳಿಸಿ ಎಂಬ ಅಭಿಯಾನದೊಂದಿಗೆ ಎಲ್ಲರಲೂ ಜಾಗೃತಿ ಮೂಡಿಸಿ, ವನ್ಯ ಜೀವಿಗಳ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಪ್ರಾಚಾರ್ಯು ವಿದ್ಯಾ ನಾಯಕ ಮಾತನಾಡಿದರು. ಸಿ.ಆರ್. ನಾಯ್ಕ, ಚಂದ್ರಶೇಖರ ಕಟ್ಟಿಮನಿ, ಬಸನವಗೌಡ ಬಗಲಿ, ಗೋಪಾಲ್ ಗೌಡ, ವನ್ಯಜೀವಿಗಳ ಕುರಿತು ಉಪನ್ಯಾಸ ನೀಡಿದರು. ವಲಯ ಅರಣ್ಯಾಧಿಕಾರಿಗಳಾದ ಲೋಕೇಶ ಪಾಠಣಕರ, ದೀಪಕ ನಾಯ್ಕ, ಎನ್.ಕೆ. ನಾಯ್ಕ , ಗ್ರಂಥಪಾಲಕಿ ಸವಿತಾ ನಾಯಕ, ಸುಮಯ್ಯ ಸೈಯದ್ ಉಪಸ್ಥಿತರಿದ್ದರು. ಅಂಕೋಲಾ ಆರ್​ಎಫ್ ಪ್ರಮೋದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾ ಗೌಡ ಪ್ರಾರ್ಥಿಸಿದರು. ಸೌಜನ್ಯ ಮತ್ತು ಅರ್ಪಿತಾ ಜೆ. ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net