ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಗಿಸಿಕೊಳ್ಳಿ

Oplus_0
ಶಾಲಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ 5 ದಿನಗಳ ಯೋಗೊತ್ಸವ ಮತ್ತು ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರ-2024ರ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.
Published on

ಚನ್ನರಾಯಪಟ್ಟಣ: ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ನಮ್ಮ ಬದುಕಿನಲ್ಲಿ ಉದ್ದೀಪನಗೊಳ್ಳಲು ಯೋಗ, ಧ್ಯಾನ ಅತ್ಯವಶ್ಯಕ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಶಾಂತಿವನ ಟ್ರಸ್ಟ್ ನಿರ್ದೇಶಕ ಡಾ.ಪಿ.ಶಶಿಕಾಂತ್ ಜೈನ್ ಹೇಳಿದರು.

ಪಟ್ಟಣದಲ್ಲಿನ ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಮಕ್ಕಳ ಸಾಹಿತ್ಯ ಪರಿಷತ್ತು, ಮತ್ತು ಶಾಲಿನಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆಸಲಾದ 5 ದಿನಗಳ ಯೋಗೊತ್ಸವ ಮತ್ತು ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರ-2024ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿರು.

ಮಕ್ಕಳ ಬೆಳವಣಿಗೆ ಹಂತದಲ್ಲಿ ಯೋಗ ಅಡಿಪಾಯವಿದ್ದಂತೆ. ಮಾನಸಿಕ ಸದೃಢತೆದೊಂದಿಗೆ ಶೈಕ್ಷಣಿಕವಾಗಿ ಉತ್ತಮ ಸಾಧನೆಗೆ ಯೋಗ ಸಹಕಾರಿಯಾಗಿದೆ. ಇಲ್ಲಿ ನಡೆಸಲಾದ 5 ದಿನಗಳ ಶಿಬಿರ ಅಷ್ಟಕ್ಕೆ ಸೀಮಿತವಾಗದೆ, ಶಿಬಿರಾರ್ಥಿಗಳ ಪ್ರತಿದಿನದ ದಿನಚರಿಯಾಗಬೇಕು. ಶಿಬಿರದಲ್ಲಿ ಕಲಿತದ್ದನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಕೆಲಸವಾಗಬೇಕು. ನಿಮ್ಮ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ ಎರಡು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದು, ಬದುಕು ಹಸನು ಮಾಡಿಕೊಂಡು ದೇಶ, ನಾಡು, ಶಾಲೆ ಮತ್ತು ಮನೆಗೆ ಕೀರ್ತಿ ತರುವಂತಾಗಬೇಕು ಎಂದು ಆಶಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಸಂಸ್ಥೆ ಯೋಜನಾಧೀಕಾರಿ ಕೆ.ಪ್ರಸಾದ್ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಧಾರ್ಮಿಕ, ಶೈಕ್ಷಣಿಕ ಮತ್ತು ಅರ್ಥಿಕವಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದಿದೆ. ಜನರ ಉತ್ತಮ ಆರೋಗ್ಯದ ಸಲುವಾಗಿ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯು ತಾಲೂಕಿನ 60 ಕಡೆಗಳಲ್ಲಿ 7 ದಿನಗಳ ಯೋಗೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದೆ. ಸರ್ವ ರೋಗಕ್ಕೂ ಯೋಗವೇ ಪರಿಹಾರ. ಈ ಮೂಲಕ ಗ್ರಾಮೀಣ ಜನರು ಯೋಗದಲ್ಲಿ ತೊಡಗಿ ಉತ್ತಮ ಆರೋಗ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧೆಡೆ ಶಿಬಿರ ಅಯೋಜನೆ ನಡೆಸಲಾಗುತ್ತದೆ ಎಂದರು.

5 ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ತಾವು ಕಲಿತಿದ್ದು, ಶಿಬಿರದಿಂದ ಆದ ಉಪಯೋಗದ ಕುರಿತಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ್ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು.
ಶಾಲಿನಿ ವಿದ್ಯಾಸಂಸ್ಥೆ ಸಂಸ್ಥಾಪಕ ನಂಜುಂಡೇಗೌಡ, ಕಾರ್ಯದರ್ಶಿ ಸಿ.ಎನ್.ಅಶೋಕ್, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಡಿ.ಆರ್.ಚೆನ್ನಕೇಶವ, ರೇವಣ್ಣ ಸಿದ್ದಪ್ಪ, ಬಸವರಾಜ್, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಹಾದೇವ್, ಹೂ.ವಿ.ಸಿದ್ದೇಶ್, ಜಯರಾಂ, ಎ.ಎಲ್.ನಾಗೇಶ್, ಲನಾ ಗುಪ್ತ, ದೀಪ್ತಿ, ಲತಾ, ಮಂಜಣ್ಣ, ಜಗದೀಶ್, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net