ಪ್ರತಿಯೊಬ್ಬರೂ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಿ

Everyone should get government benefits
Everyone should get government benefits
Published on

ಲೋಕಾಪುರ: ಪ್ರತಿಯೊಬ್ಬ ನಾಗರಿಕನು ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದರ ಜತೆಗೆ ಸರ್ಕಾರಿ ಶಾಲೆಯ ಮಹತ್ವ ತಿಳಿಯುವಂತಾಗಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸಮೀಪದ ಪೆಟ್ಲೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಆರ್‌ಎಂಎಸ್‌ಎ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ಮಕ್ಕಳು ಕಲಿಯಲು ಸಾಕಷ್ಟು ಸೌಲಭ್ಯಗಳಿದ್ದರು. ಇವತ್ತು ಖಾಸಗಿ ಶಾಲೆಯ ಕಡೆ ಮುಖ ಮಾಡುತ್ತಿದ್ದಾರೆ. ಇದು ಆಗಬಾರದು ಎಂದರು.

ಗ್ರಾಮದ ಪಾಂಡಪ್ಪಗೌಡ ಪಾಟೀಲ ಅವರು ಶಾಲೆಗೆ ಒಂದು ಎಕರೆ ಜಮೀನು ನೀಡಿದ್ದು ಅವರ ದೊಡ್ಡ ಗುಣವಾಗಿದೆ. ಇಂತಹವರನ್ನು ಸನ್ಮಾನ ಮಾಡಿದ್ದು ಸಂತೋಷವಾಗಿದೆ. ಇನ್ನೂ ಒಂದು ಎಕರೆ ಜಾಗವನ್ನು ಗ್ರಾಮಸ್ಥರೇ ಶಾಲೆಗೆ ದಾನವಾಗಿ ನೀಡಲು ಮುಂದಾಗಿದ್ದು, ಗ್ರಾಮದ ಮಕ್ಕಳ ಏಳ್ಗೆಗೆ ನಮ್ಮ ಸರ್ಕಾರ ಗ್ರಾಮಸ್ಥರೊಂದಿಗೆ ಕೈಜೋಡಿಸಲಿದೆ ಎಂದರು.

ಕ್ರೀಯಶೀಲ ಉಪಪ್ರಾಚಾರ್ಯ ಸಿದ್ದಣ್ಣ ಸತ್ತಿಗೇರಿ ಅವರನ್ನು ಲೋಕಾಪುರ ಆದರ್ಶ ವಿದ್ಯಾಲಯದಿಂದ ಈ ಶಾಲೆಗೆ ಹೆಚ್ಚುವರಿ ಮುಖ್ಯಶಿಕ್ಷಕರಾಗಿ ಆದೇಶ ಮಾಡಲಾಗಿದೆ. ಅವರು ಈ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡಲಿದ್ದಾರೆ ಎಂದರು.

ಉಪನಿರ್ದೇಶಕ ಎಚ್.ಜಿ. ಮಿರ್ಜಿ ಮಾತನಾಡಿ, ಮುಧೋಳ ತಾಲೂಕು ಶೈಕ್ಷಣಿಕವಾಗಿ ಮುಂದೆ ಬರಲು ಸರ್ಕಾರಿ ಶಾಲೆಗಳು ಹೆಚ್ಚಾಗಿರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಮಾತನಾಡಿದರು.

ಸದುಗೌಡ ಪಾಟೀಲ, ಹಂಚಿನಮನಿ, ಎಸ್.ಎಸ್. ಹಲಾವರ, ಎ.ಆರ್. ಛಬ್ಬಿ, ಪ್ರಕಾಶ ಹೊಸಮನಿ, ಸಿ.ಆರ್. ಓಣಿ, ಗುತ್ತಿಗೆದಾರ ರಾಮಕೃಷ್ಣ ಬೆಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net