ಪ್ರತಿಯೊಬ್ಬರೂ ಶರಣರ ವಿಚಾರ ಅಳವಡಿಸಿಕೊಳ್ಳಿ

MDG UPANYASA
Published on

ಮುಂಡರಗಿ: ಹನ್ನೆರಡನೇ ಶತಮಾನದ ಶರಣರು ನುಡಿದಂತೆ ನಡೆದವರು. ನಡೆದಂತೆ ನುಡಿದವರು. ಅವರ ಮಾತು ಮತ್ತು ಕೃತಿ ಬೇರೆ-ಬೇರೆಯಾಗಿರಲಿಲ್ಲ. ಎರಡೂ ಒಂದೇ ಆಗಿದ್ದವು. ಅಂತಹ ವ್ಯಕ್ತಿತ್ವ, ಉತ್ತಮ ವಿಚಾರಗಳನ್ನು ಇಂದಿನ ಸಮಾಜ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್.ಎಂ. ಹೊಸಮಠ ಹೇಳಿದರು.

ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಶಸಾಪ, ಕಸಾಪ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಚಿಂತನ ಮಾಲೆ-12 ರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣ ಕಿನ್ನರಿ ಬೊಮ್ಮಾಯ್ಯ ಅವರ ಕುರಿತು ಉಪನ್ಯಾಸ ನೀಡಿದ ಸಂಗೀತ ಶಿಕ್ಷಕಿ ಜಯಶ್ರೀ ಅಳವಂಡಿ ಅವರು, ಕಿನ್ನರಿ ಬೊಮ್ಮಯ್ಯನವರು ಒಳ್ಳೆಯ ದೈವಭಕ್ತನಾಗಿದ್ದನು. ಗುರು-ಲಿಂಗ-ಜಂಗಮರ ಸೇವೆಯಲ್ಲಿ ಬದುಕನ್ನು ಸಾಗಿಸುತ್ತಿದ್ದರು. ಅಕ್ಕಸಾಲಿಗ ವೃತ್ತಿಯನ್ನು ತೊರೆದು ಕಿನ್ನರಿ ನುಡಿಸುವ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ವಚನಗಳನ್ನು ಬರೆದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವೀಣಾ ಪಾಟೀಲ ಮಾತನಾಡಿ, ಡಾ.ಸಿದ್ದಯ್ಯ ಪುರಾಣಿಕ ರಚಿಸಿದ ಶರಣ ಚರಿತಾಮೃತವು ಕಲ್ಯಾಣದಲ್ಲಿ ಆಗಿ ಹೋದ ಶರಣರ ಕುರಿತು ವಿಸõತ ಮಾಹಿತಿ ಹೊಂದಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರ್.ಎಲ್. ಪೊಲೀಸಪಾಟೀಲ, ವಿ.ಕೆ. ಗುಡದಪ್ಪನವರ, ಆರ್.ಕೆ. ರಾಯನಗೌಡ್ರ, ಶಂಕರ ಕುಕನೂರ, ವಿ.ಸಿ. ಅಲ್ಲಿಪೂರ, ವಿಶ್ವನಾಥ ಉಳ್ಳಾಗಡ್ಡಿ, ಕೃಷ್ಣಮೂರ್ತಿ ಸಾಹುಕಾರ, ಎಂ.ಎಸ್. ಹೊಟ್ಟಿನ, ಹನುಮರಡ್ಡಿ ಇಟಗಿ, ಆರ್.ವೈ. ಪಾಟೀಲ, ಎಂ.ಎಸ್. ಶೀರನಹಳ್ಳಿ, ಮಹೇಶ ಮೇಟಿ, ಕಾವೇರಿ ಭೋಲಾ, ಪ್ರತಿಭಾ ಹೊಸಮನಿ, ಹುಲಿಗೆಮ್ಮ ಭಜಂತ್ರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net