ಪ್ರತಿಯೊಬ್ಬರೂ ಕಾಯಕದ ಮೇಲೆ ಗೌರವ ಇಟ್ಟುಕೊಳ್ಳಿ

tdl 8-1
ತೇರದಾಳ ಪಟ್ಟಣದ ತೇರದಾಳ ತಾಲೂಕು ಮೆಕ್ಯಾನಿಕ್ ಮತ್ತು ಕೂಲಿ ಕಾರ್ಮಿಕರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಹಿರೇಮಠದ ಗಂಗಾಧರ ದೇವರು ಉದ್ಘಾಟಿಸಿದರು. ಹಿರೇಮಠದ ಗಂಗಾಧರ ದೇವರು, ಮೌಲಾನಾ ಮಂಜೂರ ಆಲಮ್, ಬೆಂಗಳೂರಿನ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ ಇತರರಿದ್ದರು.
Published on

ತೇರದಾಳ(ಗ್ರಾ): ಪ್ರತಿಯೊಬ್ಬರೂ ತಮ್ಮ ಕಾಯಕದ ಮೇಲೆ ಗೌರವ ಹಾಗೂ ಸಂತೃಪ್ತ ಭಾವನೆ ಹೊಂದಬೇಕೆಂದು ಪಿಎಸ್‌ಐ ಅಪ್ಪಣ್ಣ ಐಗಳಿ ಹೇಳಿದರು.

ಪಟ್ಟಣದ ತೇರದಾಳ ತಾಲೂಕು ಮೆಕ್ಯಾನಿಕ್ ಮತ್ತು ಕೂಲಿ ಕಾರ್ಮಿಕರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಲ್ಲದೆ, ಚಾಲನಾ ಪರವಾನಗಿ, ಇನ್ಶುರೆನ್ಸ್ ಪ್ರತಿಗಳನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು. 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬೈಕ್ ನೀಡಬಾರದು. ವಾಹನದ ಬಿಡಿ ಭಾಗಗಳನ್ನು ಬದಲಾಯಿಸಿ ಕರ್ಕಶ ಶಬ್ಧವನ್ನುಂಟುಮಾಡುವ ಸೈಲೆನ್ಸರ್ ಅಳವಡಿಸಬಾರದು. ಗಾಡಿಯ ಬಣ್ಣ ಬದಲಾಯಿಸುವುದನ್ನು ಮಾಡಿದರೆ ಕಳುವಾದ ವಾಹನ ಪತ್ತೆ ಹಚ್ಚಲು ತೊಂದರೆಯಾಗುತ್ತದೆ ಎಂದು ತಿಳಿಸಿದರು.

ಹಿರೇಮಠದ ಗಂಗಾಧರ ದೇವರು, ಮೌಲಾನಾ ಮಂಜೂರ ಆಲಮ್ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಶ, ದ್ವಿಚಕ್ರ ವಾಹನ ದುರಸ್ತಿ ಸಂಘ ಮತ್ತು ಉತ್ತರ ಕರ್ನಾಟಕ ಮೆಕ್ಯಾನಿಕ್ ಹುಬ್ಬಳ್ಳಿ ಸಂಘದ ಅಧ್ಯಕ್ಷ ಮಂಜುನಾಥ ಕೋಟೇಶ್ವರ, ಬೆಳಗಾವಿ ಉದ್ಯಮಿ ಕರಣ್, ಅಧ್ಯಕ್ಷ ಅಲ್ಲಾಭಕ್ಷ ಅಲಾಸ್, ಉಪಾಧ್ಯಕ್ಷ ಪ್ರವೀಣ ಬಾವಲೆ, ಭೀಮಪ್ಪ ಸಾವಳಗಿ, ಅಯ್ಯೂಬ್ ತಾಂಬೋಳಿ, ಪ್ರಕಾಶ ಗೋಕಾಕ, ರಾಜೇಂದ್ರ ಮುಧೋಳ, ಹಣಮಂತ ಮೂಡಲಗಿ, ಆರ್ೀ ಜಮಖಂಡಿ, ಜ್ಯೋತಿಭಾ ಲೋಹಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net