ಪ್ರತಿಯೊಬ್ಬರೂ ಸಂದೇಶಗಳನ್ನು ಪಾಲಿಸಿ

Untitled design
ಹರಪನಹಳ್ಳಿಯ ತಾಲೂಕು ಆಡಳಿತ ಸೌಧದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶಾಸಕಿ ಎಂ.ಪಿ.ಲತಾ, ತಹಸೀಲ್ದಾರ್ ಗಿರೀಶಬಾಬು, ಅಧಿಕಾರಿಗಳಾದ ರೇಣುಕಾದೇವಿ, ಆರ್.ಬಳ್ಳಾರಪ್ಪ, ನಟರಾಜ, ಎನ್.ಜಿ.ಬಸವರಾಜ ಇತರರಿದ್ದರು.
Published on

ಹರಪನಹಳ್ಳಿ: ಶ್ರೀಕೃಷ್ಣನ ವ್ಯಕ್ತಿತ್ವ ಅದ್ಭುತವಾದದು. ಆತನ ಜೀವನದ ಪ್ರತಿ ಘಟನೆಯೂ ಅನುಕರಣೀಯ. ಪರಮಾತ್ಮನ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಸುಖ ಜೀವನ ನಡೆಸಬಹುದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.


ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತಹಸೀಲ್ದಾರ್ ಗಿರೀಶ ಬಾಬು ಮಾತನಾಡಿ, ಶ್ರೀಕೃಷ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಆತ ಹೇಳಿದ ಗೀತ ಸಾರ ಎಲ್ಲರೂ ಅನುಸರಿಸಬೇಕು ಎಂದರು. ಯಾದವ ಸಮಾಜದ ಮುಖಂಡ ಎನ್.ಜಿ.ಬಸವರಾಜ ಮಾತನಾಡಿ, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು. ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು ಎಂದರು.


ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಎಡಿಎಲ್ ಆರ್.ಬಳ್ಳಾರಪ್ಪ, ಗ್ರೇಡ್ 2 ತಹಸೀಲ್ದಾರ್ ನಟರಾಜ, ಯಾದವ ಸಮಾಜದ ಮುಖಂಡರಾದ ಪ್ರಕಾಶ, ಅಂಬ್ಲಿ ಶಿವಪ್ಪ, ಸಣ್ಣ ಲಿಂಗಪ್ಪ, ಹನುಮಂತಪ್ಪ, ಸೋಮಪ್ಪ, ಮತ್ತೂರು ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net