ಎಲ್ಲರೂ ಸಂವಿಧಾನದ ಮಹತ್ವ ತಿಳಿಯಿರಿ

KDR const
ಕಡೂರು ತಾಲೂಕು ಸರಸ್ವತಿಪುರ ಗ್ರಾಮದಲ್ಲಿ ಸಂವಿಧಾನ ರಥಯಾತ್ರೆಯನ್ನು ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ಸ್ವಾಗತಿಸಿದರು. ಭಾಗೀರಥಿ, ಸಂತೋಷ್, ಬಸವರಾಜ ನಾಯ್ಕ, ನರಸಿಂಹಮೂರ್ತಿ, ಶಾಲಾ ಮಕ್ಕಳು ಇದ್ದರು.
Published on

ಕಡೂರು: ಪ್ರತಿ ಭಾರತೀಯನಿಗೂ ಸಮಾನ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ಹೇಳಿದರು.

ಸರಸ್ವತಿಪುರ ಗ್ರಾಮದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಗುರುವಾರ ಸಂವಿಧಾನ ಜಾಗೃತಿ ರಥಯಾತ್ರೆ ಸ್ವಾಗತಿಸಿ ಮಾತನಾಡಿ, ಸಂವಿಧಾನ ಭಾರತದ ಶ್ರೇಷ್ಠ ಗ್ರಂಥ. ಈ ಉದ್ದೇಶದಿಂದಲೇ ಸಂವಿಧಾನ ರಥಯಾತ್ರೆಯನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಸಂವಿಧಾನ ನೀಡಿರುವ ಸಮಾನ ಹಕ್ಕಿನಿಂದಲೇ ಸಾಮಾನ್ಯನೊಬ್ಬ ದೇಶದ ಅತ್ಯುನ್ನತ ಸ್ಥಾನಕ್ಕೇರುವ ಅವಕಾಶ ಲಭ್ಯವಾಗಿದೆ ಎಂದರು.
ಸಂವಿಧಾನಕ್ಕೆ ಅಗೌರವವಾಗಿ ಮಾತನಾಡುವುದು ಒಳ್ಳೆಯದಲ್ಲ. ಪ್ರತಿಯೊಬ್ಬರೂ ಸಂವಿಧಾನಕ್ಕೆ ಗೌರವ ನೀಡಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳನ್ನು ಆದರ್ಶವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ರಥಯಾತ್ರೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಕರೆತರಲಾಯಿತು. ಜಾನಪದ ಕಲಾತಂಡಗಳೊಂದಿಗೆ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು. ಸರಸ್ವತೀಪುರ ಆಶ್ರಮ ಶಾಲೆ ಮಕ್ಕಳು ಅಭಿನಯಿಸಿದ ನೃತ್ಯರೂಪಕ ಗಮನ ಸೆಳೆಯಿತು.
ಸಮಾಜಕಲ್ಯಾಣ ಅಧಿಕಾರಿಗಳಾದ ಎಚ್.ಡಿ.ರೇವಣ್ಣ, ಪಾಟೀಲ್, ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿ ಭಾಗೀರಥಿ, ಗ್ರಾಪಂ ಸದಸ್ಯ ಸಂತೋಷ್, ಪಿಡಿಒಗಳಾದ ಬಸವರಾಜನಾಯ್ಕ, ನರಸಿಂಹಮೂರ್ತಿ, ಪದ್ಮನಾಭ, ತಿಮ್ಮ ಶೆಟ್ಟಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀಕಾಂತ್, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net