

ಎನ್.ಅರ್.ಪುರ: ತೀರ್ಥಹಳ್ಳಿಯಲ್ಲಿ ಮಾದರಿಯಲ್ಲಿ ಎನ್.ಆರ್.ಪುರದಲ್ಲೂ ಅದ್ಧೂರಿ ತೆಪ್ಪೋತ್ಸವ ನಡೆಸಿರುವುದು ಸಂತಸ ತಂದಿದೆ ಎಂದು ಉದ್ಯಮಿ ಗದ್ದೇಮನೆ ವಿಶ್ವನಾಥ್ ಹೇಳಿದರು.
ಮೆಣಸೂರು ಭದ್ರಾ ಹಿನ್ನೀರಿನ ತಟದಲ್ಲಿ ಶರನ್ನವರಾತ್ರಿ ಸಮಿತಿಯಿಂದ ನಡೆದ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹಿಂದು ಧಾರ್ಮಿಕ ಹಬ್ಬಗಳು ಅದ್ಧೂರಿಯಾಗಿ ಜರುಗಬೇಕು. ಊರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಊರಿಗೆ ಒಳಿತಾಗುತ್ತದೆ ಎಂದರು.
ಶರನ್ನವರಾತ್ರಿ ಸಮಿತಿ ಗೌರವಾಧ್ಯಕ್ಷ ಜಿ.ದಿವಾಕರ್ ಮಾತನಾಡಿ, ಧರ್ಮದ ಬಗ್ಗೆ ಕೇವಲ ವ್ಯಾಟ್ಸಪ್, ೇಸ್‌ಬುಕ್‌ಗಳ ಮೂಲಕ ಹಂಚಿದರೆ ಸಾಲದು. ಒಂದು ಊರಿನ ಹಬ್ಬವನ್ನು ಆಚರಿಸುವುದು ಸುಲಭದ ಕೆಲಸವಲ್ಲ. ಹಿಂದುಗಳು ಎಲ್ಲರೂ ಒಗ್ಗೂಡಿ ಕೈ ಜೋಡಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಮಾಡಬಹುದು ಎಂದರು.
ಸಮಿತಿ ಕಾರ್ಯದರ್ಶಿ ಎನ್.ಎಂ.ಕಾರ್ತಿಕ್, ಖಜಾಂಚಿ ಎಂ.ಸಿ.ಗುರುಶಾಂತಪ್ಪ, ಪದಾಧಿಕಾರಿಗಳಾದ ಪ್ರಶಾಂತ್.ಎಲ್.ಶೆಟ್ಟಿ, ಕೆ.ಎಸ್.ಸಂತೋಷ್‌ಕುಮಾರ್, ಕಮ್ತಿವಾಸಪ್ಪಗೌಡ, ಎಸ್.ಎಸ್.ಜಗದೀಶ್, ಮಾವಿನಮನೆಮಂಜುನಾಥ್, ಸುನೀಲ್‌ಕುಮಾರ್, ಡಿ.ಜಿಕುಮಾರ, ಸುರಭಿರಾಜೇಂದ್ರ, ನರೇಶ್ ಲಾಡ್,ಸಂತೋಷ್‌ಕುಮಾರ್, ಚಿನ್ಮಯ್, ನಾಗಾರ್ಜುನ, ಶಶಿ, ಜಯಂತ್, ನಾಗೇಂದ್ರ, ನವೀನ ಇದ್ದರು.