ಧರ್ಮದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ

ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ಮೇ.7 ರಂದು ನಡೆಯುವ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಮಹಾಂತೇಶ, ತಿಮ್ಮಣ್ಣ, ಲಕ್ಷ್ಮಣ, ನಾಗರಾಜ, ಮುತ್ತಣ್ಣ, ದೇವಪ್ಪ, ಹೊನಕೇರಪ್ಪ ಇತರರಿದ್ದರು.
ಅಳವಂಡಿ ಸಮೀಪದ ಕವಲೂರು ಗ್ರಾಮದಲ್ಲಿ ಮೇ.7 ರಂದು ನಡೆಯುವ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ಮರುಳಾರಾದ್ಯ ಶಿವಾಚಾರ್ಯರು, ಪ್ರಮುಖರಾದ ಮಹಾಂತೇಶ, ತಿಮ್ಮಣ್ಣ, ಲಕ್ಷ್ಮಣ, ನಾಗರಾಜ, ಮುತ್ತಣ್ಣ, ದೇವಪ್ಪ, ಹೊನಕೇರಪ್ಪ ಇತರರಿದ್ದರು.
Published on

ಅಳವಂಡಿ: ಮನುಕುಲದ ಏಳಿಗೆಗಾಗಿ ಕವಲೂರು ಗ್ರಾಮಸ್ಥರು ಕೈಗೊಂಡ ಧಾರ್ಮಿಕ ಕಾರ್ಯ ಶ್ಲಾಘನೀಯ. ಧಾರ್ಮಿಕ ಕಾರ್ಯಕ್ಕೆ ಸರ್ವರು ಕೈಜೋಡಿಸಬೇಕು ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಕವಲೂರು ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀದುರ್ಗಾದೇವಿ ಜಾತ್ರೋತ್ಸವ, ಮೇ7 ರಂದು ನಡೆಯುವ ಉಜ್ಜಯಿನಿ ಪೀಠದ ಶ್ರೀ1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಭೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಉಜ್ಜಯಿನಿ ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಿದರೆ ಮಳೆ, ಬೆಳೆ ಸಮೃದ್ಧಿಯಾಗಿ ನೆಮ್ಮದಿ ನೆಲೆಸಲಿದೆ ಎಂಬ ಇತಿಹಾಸವಿದೆ. ಆದ್ದರಿಂದ ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಶ್ರೀ ಮರುಳಾರಾದ್ಯ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಶ್ರೇಯೋಭಿವೃದ್ಧಿಗೆ ಪ್ರತಿಯೊಂದು ಧರ್ಮವನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಆಧುನಿಕತೆಯ ಹಿಂದೆ ಬಿದ್ದ ಮಾನವ ಬಾಂಧವ್ಯ ಮರೆತು ಜೀವಿಸುತ್ತಿದ್ದಾನೆ. ಇದು ಮನಶಾಂತಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಎಲ್ಲರೂ ನಮ್ಮ ಪರಂಪರೆಯನ್ನು ಬೆಳೆಸಿ ಉಳಿಸಬೇಕು ಎಂದು ತಿಳಿಸಿದರು.

ಪ್ರಮುಖರಾದ ಮಹಾಂತೇಶ ಸಿಂದೋಗಿಮಠ, ತಿಮ್ಮಣ್ಣ ಸಿದ್ನೆಕೊಪ್ಪ, ಮುತ್ತಣ್ಣ ಬಿಸರಳ್ಳಿ, ಹನುಮಂತ ಹೊಸಮನಿ, ಹೊನಕೇರಪ್ಪ ಮುಕ್ಕಣ್ಣವರ, ನಾಗರಾಜ ಕಗ್ಗಲ್, ಲಕ್ಷ್ಮಣ ದೊಡ್ಡಮನಿ, ವೀರಣ್ಣ ದ್ಯಾಂಪೂರ, ಶರಣಪ್ಪ ಯರಾಶಿ, ವಿಜಯಕುಮಾರ ಪೂಜಾರ, ಗವಿಸಿದ್ದಯ್ಯ ಹುಲಕಂತಿಮಠ, ರೇವಣಸಿದ್ದಯ್ಯ ಸಜ್ಜೇದಮಠ, ಯಂಕಣ್ಣ ಹಳ್ಳಿ, ಶೇಖರಯ್ಯ ಅಂಗಡಿ, ಬಸಯ್ಯ ಚುರ್ಚಿಹಾಳ, ಬಸಯ್ಯ ಎಲಿಗಾರ, ರಮೇಶ ಹಂದ್ರಾಳ, ಯಂಕಪ್ಪ ಹೈತಾಪುರ, ಸಿದ್ದಪ್ಪ ಗಿಣಿಗೇರಿ, ಪರಸಪ್ಪ ಕಲಾಲ, ರಾಮಣ್ಣ ಗುಡಿ, ಬಸವರಾಜ, ವಿ.ಕೆ.ದೇಸಾಯಿ, ಈರಪ್ಪ, ಪ್ರವೀಣ, ದೇವಪ್ಪ ಹಳ್ಳಿ, ಕರಿಯಪ್ಪ ಎಮ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net