

ಕೋಟ: ಶ್ರೀನಿವಾಸ ಕಲ್ಯಾಣೋತ್ಸವ ಭಗವಂತನ ಇಚ್ಛೆ. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗೋಣ ಎಂದು ಕೋಟದ ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ.ಕುಂದರ್ ಹೇಳಿದರು.
ಸೋಮವಾರ ಸಾಸ್ತಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಕಚೇರಿ ಉದ್ಘಾಟಿಸಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ವಿದ್ವಾನ್ ಡಾ.ವಿಜಯ್ ಮಂಜರ್ ದೀಪ ಬೆಳಗಿಸಿ ಶುಭಹಾರೈಸಿದರು. ಪ್ರಸನ್ನ ತುಂಗ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಶ್ರೀ ನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ.ಚಂದ್ರಶೇಖರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಜಗದೀಶ್ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಪ್ರಮುಖರಾದ ಜ್ಯೋತಿ ಉದಯ್‌ಕುಮಾರ್, ಸುಲತಾ ಹೆಗ್ಡೆ, ರತ್ನ ನಾಗರಾಜ್, ಶ್ಯಾಮಸುಂದರ್ ನಾಯರಿ, ಪುನಿತ್ ಪೂಜಾರಿ, ಲೀಲಾವತಿ ಗಂಗಾಧರ, ಸುಬ್ರಾಯ ಆಚಾರ್, ಪ್ರತಾಪ್ ಶೆಟ್ಟಿ, ನಾಗರಾಜ್, ಜಿ.ವಿಠ್ಠಲ್ ಪೂಜಾರಿ, ಶಿವರಾಮ ಉಡುಪ, ರಘು ಮಧ್ಯಸ್ಥ, ಋಷಿರಾಜ್, ಪ್ರಶಾಂತ್ ಶೆಟ್ಟಿ, ನಟರಾಜ ಗಾಣಿಗ, ಜಯಲಕ್ಷ್ಮೀ, ಸೇವಾಪ್ರತಿನಿಧಶಿಗಳು ಉಪಸ್ಥಿತರಿದ್ದರು. ಗಣೇಶ್ ಜಿ.ಚೆಲ್ಲಮಕ್ಕಿ ನಿರೂಪಿಸಿದರು. ವಿಠ್ಠಲ್ ಪೂಜಾರಿ ವಂದಿಸಿದರು.