ಎಲ್ಲರೂ ಪರಿಸರ ರಕ್ಷಣೆಯಲ್ಲಿ ತೊಡಗಿ

6 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪರಿಸರ ದಿನ ಅಂಗವಾಗಿ ನಗರದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿನ ಟಾಟಾ ಮೋಟಾರ್ಸ್​ ಬಾಡಿ ಸೊಲ್ಯೂಷನ್ಸ್​ ಲಿ. ಕಾರ್ಪೊರೇಟ್​ ಸಾಮಾಜಿಕ ಜವಾಬ್ದಾರಿಯ ವಸುಂಧರಾ ಭಾಗವಾಗಿ ನೀರಲಕಟ್ಟಿ ಗ್ರಾಮದ ಕೆರೆ ಸುತ್ತಲೂ 1000 ಸಸಿಗಳನ್ನು ಶುಕ್ರವಾರ ನಡೆಲಾಯಿತು.

ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರವಿ ಕುಲಕರ್ಣಿ ಮಾತನಾಡಿ, ಕಂಪನಿಯ ಸಿಎಸ್​ಆರ್​ ಕಾರ್ಯಕ್ರಮಗಳ ಭಾಗವಾಗಿ ಧಾರವಾಡ ಘಟಕದ ಸುತ್ತಲಿನ ಸಮುದಾಯಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿದೆ. ಸಸಿಗಳನ್ನು ನೆಡುವುದು ಸಹ ಒಂದಾಗಿದೆ. ಪರಿಸರ ಪ್ರೇಮ ಒಂದು ದಿನಕ್ಕೆ ಸೀಮಿತವಾಗದೆ, ನಿರಂತರವಾಗಿರಬೇಕು. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.

ಆರ್​.ಎಸ್​. ಪಾಟೀಲ ಮಾತನಾಡಿ, ಕೆರೆ ಸುತ್ತಲಿನ ಹಸಿರನ್ನು ಹೆಚ್ಚಿಸಿದ್ದಕ್ಕಾಗಿ ಹಾಗೂ ನೀರಲಕಟ್ಟಿ ಗ್ರಾಮದಲ್ಲಿ ಕಂಪನಿಯಿಂದ ವಿವಿಧ ಯೋಜನೆಗಳನ್ನು ನೀಡಿರುವುದು ಸಂತಸದ ಸಂಗತಿಯಾಗಿದೆ. ಪರಿಸರ ದಿನದಂದು ನೆಟ್ಟಿರುವ ಗಿಡಗಳನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಗುರು ಹಿರಿಯರು, ಟಿಎಂಬಿಎಸ್​ಎಲ್​ ನೌಕರರು ಹಾಗೂ ಶಾಲಾ ಮಕ್ಕಳು ಸಂಪಿಗೆ, ಹೊಂಗೆ, ತೇಗ, ಹುಣಸೆ, ನೇರಳೆ, ಸೇರಿ ವಿವಿಧ ಸಸಿಗಳನ್ನು ನೆಟ್ಟರು.

ಕಂಪನಿಯ ಸತೀಶ ದೇಶಪಾಂಡೆ, ಸಿಬ್ಬಂದಿ, ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net