

ರಾಯಚೂರು ಜಿಲ್ಲಾ ವಾಲ್ಮೀಕಿ ಸಮುದಾಯ ಹಾಗೂ ಜಿಲ್ಲಾಡಳಿತದಿಂದ ಅ.7 ರಂದು ನಗರದ ವಾಲ್ಮೀಕಿ ಭವನದಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯ ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಸಮಾಜದವರು ಸಕ್ರಿಯವಾಗಿ ಭಾಗವಹಿಸಬೇಕೆಂದು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕರಡು ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಕರಡು ಸಮಿತಿ ಅವಧಿ ತಾತ್ಕಾಲಿಕವಾಗಿದ್ದ ಕೆಲವರು ವಜಾಗೊಳಿಸಿರುವದಾಗಿ ದುರುದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದಾರೆ. ಒಂದು ವರ್ಷದ ಹಿಂದೆಯೇ ಕರಡು ಸಮತಿ ಅಸ್ತಿತ್ವದಲ್ಲಿ ಇಲ್ಲ. ಕರಡು ಸಮಿತಿ ಸದಸ್ಯರಲ್ಲದವರು ವಜಾಗೊಳಿಸಿರುವದಾಗಿ ಹೇಳಿಕೆ ನೀಡಿದ್ದ ಅವರಿಗೆ ಅಧಿಕಾರವೇ ಇಲ್ಲ . ಸಮಾಜದ ಹಿರಿಯರು ಸೇರಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಮಾಜದ ಸಂಘಟನೆಗಾಗಿ ಶ್ರಮಿಸುವದಾಗಿ ಎಂದರು.
ವಾಲ್ಮೀಕಿ ಸಮಾಜದವನ್ನು ಸಂಘಟಿತವಾಗಿ ನಡೆಸಲು ಒಂದೇ ವೇದಿಕೆಯಲ್ಲಿ ಎಲ್ಲರೂ ಒಗ್ಗೂಡಿಸಿ ಕಾರ್ಯನಿರ್ವಹಿಸಬೇಕಿದೆ. ಅಭಿಪ್ರಾಯಗಳನು ಬಿಟ್ಟು ಸಂಘಟನೆ ಕಟ್ಟುವದಕ್ಕೆ ಸಹಕರಿಸಬೇಕೆಂದರು. ಸಮಾಜ ಮೀಸಲಾತಿಯಿಂದ ಗೆದ್ದು ಸಂಸದರು, ಶಾಸಕರಾಗಿ ಆಯ್ಕೆಯಾಗಿರುವವರು ನಾಯಕ ಸಮಾಜದ ಮೀಸಲಾತಿ ದುರ್ಬಳಕೆಯಾಗುವದನ್ನು ತಡೆಯಲು ಮುಖ್ಯಮಂತ್ರಿಗಳ ಮೇಲೆ ಒತ್ತಾಡ ಹಾಕಬೇಕಿದೆ.
ಸಮಾಜಕ್ಕೆ ಮೀಸಲಿರು ಶೇ.7.5 ಮೀಸಲು ದೊರೆಯದೇ ಇರುವಾಗಲೇ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ಸಿದ್ದತೆ ಪ್ರಾರಂಭಿಸಿದೆ. ಆದರೆ ನಾಯಕ ಸಮಾಜ ಮೀಸಲು ಕಸಿದುಕೊಳ್ಳುವ ಕೆಲಸ ನಿಲ್ಲಿಸಬೇಕು. ಮೀಸಲು ಪ್ರಮಾಣ ಹೆಚ್ಚಿಸದೇ ಎಸ್‌ಟಿ ಪಟ್ಟಿಗೆ ಸೇರಿಸಬೇಕೆನ್ನುವದು ಮೀಸಲು ಕಸಿದುಕೊಳ್ಳುವಂತಾಗುತ್ತದೆ. ಪ್ರತ್ಯೇಕ ಮೀಸಲು ಪಡೆದು ಎಸ್ಟಿ ಪಟ್ಟಿಗೆ ಸೇರಿಸಲು ವಿರೋಧವಿಲ್ಲ. ಆದರೆ ಇರುವ ಮೀಸಲಾತಿಯಲ್ಲಿಯೇ ಹಂಚಿಕೆ ಮಾಡಬೇಕೆನ್ನುವದು ಸಮೂದಾಯಕ್ಕೆ ಮಾಡುವ ಅನ್ಯಾಯವಾಗಿದೆ ಎಂದರು.
ಆದರಿಂದ ಶ್ರೀ ವಾಲ್ಮೀಕಿ ಸಮಾಜದಿಂದ ಆಯೋಜನೆ ಮಾಡಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಯಶಸ್ವಿಗೆ ಸಮಾಜದ ಎಲ್ಲ ಸಂಘಟನೆಗಳು ಒಗ್ಗೂಡಿ ಆಚರಣೆ ಮಾಡುವ ಜತೆಗೆ ತಿಂಗಳ ಪೂರ್ತಿ ತಾಲೂಕ, ಹೋಬಳಿ ಮಟ್ಟದಲ್ಲಿ ಜಯಂತಿ ಆಚರಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರೋಶಯ್ಯ, ನಾಗರಾಜ, ಮಲ್ಲಿಕಾರ್ಜುನ, ರವಿಕುಮಾರ ಇದ್ದರು.