ಸಂವಿಧಾನದಿಂದ ಸರ್ವರಿಗೂ ಸಮಪಾಲು ಸಮಬಾಳು

02bnk1
ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಲಾಯಿತು.
Published on

ಬಣಕಲ್: ಬಣಕಲ್, ತರುವೆ ಗ್ರಾಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಲಾಯಿತು. ಬಣಕಲ್ ಹಾಗೂ ಕೊಟ್ಟಿಗೆಹಾರದಲ್ಲಿ ಶಾಲಾ ಮಕ್ಕಳು ಅತ್ತಿಗೆರೆ, ಬಣಕಲ್ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಪೂರ್ಣಕುಂಭ ಸ್ವಾಗತ ನೀಡಿ ರಥವನ್ನು ಬರಮಾಡಿಕೊಂಡರು.
ತರುವೆ ಗ್ರಾಪಂಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ, ಸಂವಿಧಾನದಲ್ಲಿ ಏಕರೂಪ ನೀತಿಯಿಂದ ಸರ್ವರಿಗೂ ಸಮ ಪಾಲು ಹಾಗೂ ಸಮಬಾಳು ನೀತಿಯನ್ನು ಜಾರಿಗೆ ತಂದು ದೇಶದಲ್ಲಿ ಎಲ್ಲ ಸೌಲಭ್ಯಗಳು ಸಿಗುವಂತಾಗಿದೆ ಎಂದರು.
ಗ್ರಾಮದ ಹಿರಿಯರಾದ ಟಿ.ಎ.ಖಾದರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿದ್ದಾರೆ. ಇತರ ದೇಶಗಳಲ್ಲಿ ಇಲ್ಲದಿರುವ ಎಲ್ಲ ನಾಗರಿಕರಿಗೆ ಕೆಲವು ಮೌಲ್ಯಯುತ ಹಕ್ಕುಗಳನ್ನು ಸಂವಿಧಾನ ನೀಡುತ್ತದೆ. ಸಂವಿಧಾನ ರೂಪಿಸಲು ಅನೇಕರ ಶ್ರಮವಿದೆ. ಸಂವಿಧಾನವು ಯಾವುದೇ ಜಾತಿ ಮತ ಬೇಧವಿಲ್ಲದೇ ಎಲ್ಲಾ ನಾಗರಿಕರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಅವಕಾಶ ನೀಡಿದೆ. ಈ ಮೂಲಭೂತ ಹಕ್ಕುಗಳು ನಾಗರಿಕರ ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಆಧಾರವಾಗಿದೆ ಎಂದರು.
ಸಮಾಜ ಸೇವಕ ಸಂಜಯ್ ಗೌಡ ಹಾಗೂ ಪ್ರಭಾಕರ್ ಬಿನ್ನಡಿ ಸಂವಿಧಾನದ ಬಗ್ಗೆ ಮಾತನಾಡಿದರು. ಕೊಟ್ಟಿಗೆಹಾರ ವೃತ್ತದಲ್ಲಿ ಏಕಲವ್ಯ ಹಾಗೂ ಕೊಟ್ಟಿಗೆಹಾರ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net