ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ

basaveshwar bank
ಬಾಗಲಕೋಟೆ ನಗರದ ಬಸವೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 77ನೇ ಸ್ವಾತಂತ್ಯೋತ್ಸವದ ದಿನಾಚರಣೆ ಮಹೋತ್ಸವದ ಅಂಗವಾಗಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ, ಎಚ್.ಎಸ್. ರಾಠೋಡ, ವೀರಪ್ಪ ವಿ. ಶಿರಗಣ್ಣವರ, ಶ್ರೀಶೈಲ ಚ. ಆರಬ್ಬಿ, ವಿ.ವಿ.ಕಲಬುರ್ಗಿ, ಶ್ರೀನಿವಾಸ ಬಳ್ಳಾರಿ, ಸಂಗಪ್ಪ ಕಂಕಣಮೇಲಿ, ರವಿಕುಮಾರ ಪಟ್ಟಣದ, ಶಶಿಧರ ಜಿಗಳೂರ, ಸಿದ್ಧಲಿಂಗೇಶ್ವರ ಗೋಡಿ ಇದ್ದರು.
Published on

ಬಾಗಲಕೋಟೆ: ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ 77ನೇ ಸ್ವಾತಂತ್ಯೋತ್ಸವದ ದಿನಾಚರಣೆ ಮಹೋತ್ಸವ ಮಂಗಳವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ದೇಶದ ಹಿರಿಯರ ತ್ಯಾಗ-ಬಲಿದಾನದಿಂದ ಪಡೆದ ಸ್ವಾತಂತ್ರೃವನ್ನು ಅರ್ಥಪೂರ್ಣವಾಗಿ ಅಚರಿಸೋಣ. ದೇಶದ ಉನ್ನತಿಗಾಗಿ, ರಾಷ್ಟ್ರದ ಜಾಗ್ರತಿಗಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡೋಣ. 77 ವರ್ಷಗಳ ಸುದೀರ್ಘ ದಿನಗಳನ್ನು ನಾವೆಲ್ಲ ಮೇಲಕು ಹಾಕಬೇಕು. ದೇಶದ ರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿರಬೇಕು ಎಂದ ಅವರು, ಬ್ಯಾಂಕಿನ ಸದಸ್ಯರು, ಗ್ರಾಹಕರು, ಅಭಿಮಾನಿಗಳು ಹಾಗೂ ಸರ್ವರಿಗೂ ಸ್ವಾತಂತ್ರೊೃೀತ್ಸವದ ಹಾರ್ದಿಕ ಶುಭಾಶಯ ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ, ಎಚ್.ಎಸ್. ರಾಠೋಡ, ವೀರಪ್ಪ ವಿ. ಶಿರಗಣ್ಣವರ, ಶ್ರೀಶೈಲ ಚ. ಆರಬ್ಬಿ, ವಿ.ವಿ.ಕಲಬುರ್ಗಿ, ಶ್ರೀನಿವಾಸ ಬಳ್ಳಾರಿ, ಸಂಗಪ್ಪ ಕಂಕಣಮೇಲಿ, ರವಿಕುಮಾರ ಪಟ್ಟಣದ, ಶಶಿಧರ ಜಿಗಳೂರ, ಸಿದ್ಧಲಿಂಗೇಶ್ವರ ಗೋಡಿ, ನಿಂಗಪ್ಪ ಪಲ್ಲೇದ, ಸುರೇಶ ಜಂಗಿ, ಜಯಮ್ಮ ಚ. ಅಬ್ದುಲಪುರ, ಉಷಾ ಜಿಗಜಿನ್ನಿ, ಎನ್. ಆರ್. ಕುಲಕರ್ಣಿ, ಬಸವರಾಜ ಹಿರೇಗೌಡರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಕೇಮಾಳಿ, ಅಧಿಕಾರಿಗಳಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಪಿ.ಎನ್. ಹಳ್ಳಿಕೇರಿ, ಎಂ.ಎಸ್. ಗುಡಗುಂಟಿ, ವಿ.ಎಂ.ಹಿರೇಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net